ಗುಂಡಿವೃತ್ತದಲ್ಲಿ ಟ್ರಾಫಿಕ್ ಜಾಮ್; ಪೊಲಿಸರಿಂದ ದಂಡ‌

ದಾವಣಗೆರೆ.ಏ.೨೯;  ಅಗತ್ಯ ವಸ್ತುಗಳನ್ನು ಕೊಳ್ಳುವ ಸಮಯ ಮುಗಿದ ನಂತರವೂ 
ಜನರ ಸಂಚಾರ ಹೆಚ್ಚಾಗಿದ್ದು ನಿಯಂತ್ರಣಕ್ಕಾಗಿ ಪೊಲಿಸರು ಹರಸಾಹಸ ಪಟ್ಟಿದ್ದಾರೆ.ಇಂದು ಬೆಳಗ್ಗೆ ನಗರದಲ್ಲಿ ಅನಗತ್ಯ ಓಡಾಡುವ ವಾಹನಗಳ ತಡೆದು ಪೊಲೀಸರು ತಪಾಸಣೆ ನಡೆಸಿದರು.ಈ ವೇಳೆ ವಾಹನ ತಪಾಸಣೆ ಮಾಡುತ್ತಿರುವುದರಿಂದ  ಟ್ರಾಫಿಕ್ ಜಾಮ್ ಆದ ಘಟನೆ  ನಗರದ ಗುಂಡಿ ಸರ್ಕಲ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ. ನಂತರ ಸಂಚಾರ ನಿಯಂತ್ರಣಕ್ಕೆ ತಂದ ಪೋಲೀಸರು ಆರೋಗ್ಯ ವಿಚಾರವಾಗಿ ಸಂಚರಿಸುವವರಿಗಷ್ಟೆ ಅವಕಾಶ ಕಲ್ಪಿಸಿದರು.ಅಲ್ಲದೇಅನಗತ್ಯವಾಗಿ ಸಂಚಾರ ಮಾಡುತ್ತಿರುವವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಸೋಂಕಿನಿಂದ ಜನ ಸಾಯುತಿದ್ದರು ಎಚ್ಚೆತ್ತಕೊಳ್ಳದೆ ಅನಾವಶ್ಯಕ ವಾಗಿ ಜನ ಸಂಚರಿಸುತ್ತಿದ್ದ ದೃಶ್ಯ ಬೆಳಗ್ಗೆ ಕಂಡುಬಂದಿದೆ.