ಗುಂಡಿನ ದಾಳಿ ಸೇರಿ ೬ ಮಂದಿ ಸಾವು

ಕ್ಯಾಲಿಫೋರ್ನಿಯಾ,ಜ.೧೭-ಅಮೆರಿಕಾದ ಮಧ್ಯ ಕ್ಯಾಲಿಫೋರ್ನಿಯಾದ ಮನೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೧೭ ವರ್ಷದ ತಾಯಿ ಸಹಿತ, ಆಕೆಯ ಆರು ತಿಂಗಳು ಮಗು ಸೇರಿದಂತೆ ಆರು ಮಂದಿ ನಾಗರಿಕರು ಮೃತಪಟ್ಟ ಘಟನೆ ನಡೆದಿದೆ.
ವಿಸಾಲಿಯಾದ ಪೂರ್ವದಲ್ಲಿರುವ ಅಸಂಘಟಿತ ಗೋಶೆನ್‌ನಲ್ಲಿರುವ ನಿವಾಸದ ಮೇಲೆ ಗುಂಡು ಹಾರಿಸಿದ ಘಟನೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಮುಂಜಾನೆ ೩.೩೦ ರ ಸುಮಾರಿಗೆ ದೌಡಾಯಿಸಿದ್ದಾರೆ ಎಂದು ತುಲಾರೆ ಕೌಂಟಿ ಶೆರಿಫ್ ಕಚೇರಿ ಪ್ರತಿಕ್ರಿಯೆ ನೀಡಿದೆ. ೧೭ ವರ್ಷದ ತಾಯಿ ಹಾಗೂ ಆಕೆಯ ಆರು ತಿಂಗಳಿನ ಮಗುವಿನ ತಲೆಗೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಹಲವು ಬಾರಿ ಗುಂಡಿನ ದಾಳಿಯ ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಇಬ್ಬರು ರಸ್ತೆಯಲ್ಲೇ ಮೃತಪಟ್ಟರೆ ಓರ್ವ ಗಂಭೀರ ಗಾಯಗೊಳಗಾಗಿದ್ದ. ಇನ್ನೂ ಮೂವರು ಮಂದಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಕೆಲಹೊತ್ತು ಜೀವಂತವಾಗಿದ್ದರೂ ಬಳಿಕ ಮೃತಪಟ್ಟಿದ್ದ ಎಂದು ಪೊಲೀಸ್ ಅಧಿಕಾರಿ ಮೈಕ್ ಬೌಡ್ರೆಕ್ಸ್ ಸುದ್ದಿಗಾರರಿಗೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಅಧಿಕಾರಿಗಳು ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಪ್ರಕರಣದಲ್ಲಿ ಗ್ಯಾಂಗ್ ಮಾಫಿಯಾವಿದೆ ಎಂದು ಶಂಕಿಸಲಾಗಿದೆ. ಕಳೆದ ವಾರವಷ್ಟೇ ಘಟನಾ ಸ್ಥಳದಲ್ಲಿ ನಾರ್ಕೋಟಿಕ್ಸ್ (ಡ್ರಗ್ಸ್ ವಿರೋಧಿ ಕಾರ್ಯಪಡೆ) ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಗುಂಡಿನ ಚಕಮಕಿ ನಡೆದು ಹಲವರು ಮೃತಪಟ್ಟಿದ್ದಾರೆ. ಗೋಶೆನ್ ಎಂಬುದು ಕೃಷಿ ಸ್ಯಾನ್ ಜೋಕ್ವಿನ್ ಕಣಿವೆಯಲ್ಲಿ ಫ್ರೆಸ್ನೊದಿಂದ ಆಗ್ನೇಯಕ್ಕೆ ೫೬ ಕಿಮೀ ದೂರದಲ್ಲಿರುವ ಸುಮಾರು ೩,೦೦೦ ನಿವಾಸಿಗಳ ಅರೆ-ಗ್ರಾಮೀಣ ಸಮುದಾಯವಾಗಿದೆ.