ಗುಂಡಿನ ಗಮ್ಮತ್ತು, ಗುದದ್ವಾರದಿಂದ ಸ್ಟೀಲ್‍ಗ್ಲಾಸ್ ಏರಿಸಿಕೊಂಡ ಭೂಪ!ಕಲಬುರಗಿ ಸನ್‍ರೈಸ್ ಆಸ್ಪತ್ರೆ ವೈದ್ಯರಿಂದ ಯಶಸ್ವೀ ಶಸ್ತ್ರಚಿಕಿತ್ಸೆ

ಮಹೇಶ್ ಕುಲಕರ್ಣಿ
ಕಲಬುರಗಿ ಆ 30: ಕುಡಿದ ಅಮಲಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬಗುದದ್ವಾರದ ಮೂಲಕ ಹೊಟ್ಟೆಯೊಳಗೆ ಸ್ವೀಲ್ ಗ್ಲಾಸ್ ಸೇರಿಸಿಕೊಂಡು ಹೈರಾಣಾದ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದು,ಕಲಬುರಗಿಯ ಸನ್‍ರೈಸ್ ಆಸ್ಪತ್ರೆಯ ವೈದ್ಯರು ಎರಡು ತಾಸು ಶಸ್ತ್ರಚಿಕಿತ್ಸೆ ಕೈಗೊಂಡು ಹೊಟ್ಟೆಯೊಳಗಿನ ಗ್ಲಾಸ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಖದೀರ್ ಮೆಹ್ತಾಬ್‍ಸಾಬ್ ರಾಜೋಳ್‍ವಾಲೆ (35)ಇಂಥದ್ದೊಂದು ತಾಪತ್ರಯಕ್ಕೆ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿ. ಕಲಬುರಗಿಯ ಸನ್‍ರೈಸ್
ಆಸ್ಪತ್ರೆಯ ತಜ್ಞ ವೈದ್ಯರು ಕೈಗೊಂಡ ತುರ್ತು ಶಸ್ತ್ರಚಿಕಿತ್ಸೆಯಿಂದಾಗಿ ಆತ
ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯ ವಿವರ:
ಆಗಸ್ಟ್ 27ರಂದು ರಾತ್ರಿ ವಿಪರೀತ ಮದ್ಯ ಸೇವನೆ ಮಾಡಿದ್ದ ಖದೀರ್ ಮಾನಸಿಕಸಮತೋಲನ ಕಳೆದುಕೊಂಡಿದ್ದ. ಕುಡಿದ ಅಮಲಿನಲ್ಲಿ ಆತ ಸುಮಾರು 15 ಸೆಂ.ಮೀಉದ್ದದ ಸ್ಟೀಲ್ ಗ್ಲಾಸನ್ನು ಗುದದ್ವಾರದ ಮೂಲಕ ಹೊಟ್ಟೆಯೊಳಗೆ ಇಳಿಸಿಕೊಂಡಿದ್ದ. ಘಟನೆ ನಡೆದ ಕೆಲ ಹೊತ್ತಿನಲ್ಲಿಯೇ ಆತ ತೀವ್ರ ಸ್ವರೂಪದ ಹೊಟ್ಟೆನೋವಿನಿಂದ ನರಳಲು ಆರಂಭಿಸಿದ್ದಾನೆ. ಈ ಮಧ್ಯೆ, ಗುದದ್ವಾರದ ಮೂಲಕ ದೊಡ್ಡ ಕರುಳಿನಲ್ಲಿ ಹೊಕ್ಕಿದ್ದ ಗ್ಲಾಸು ಸುಮಾರು 20 ಸೆಂ.ಮೀ ಮೇಲ್ಭಾಗದಲ್ಲಿ ಭದ್ರವಾಗಿ ಕುಳಿತುಬಿಟ್ಟಿತ್ತು. ಜೊತೆಗೆ, ಸಹಿಸಲು ಅಸಾಧ್ಯವಾದ ಹೊಟ್ಟೆ ನೋವು
ಶುರುವಾಗುತ್ತಿದ್ದಂತೆಯೇ, ತನ್ನ ಅಪಕೃತ್ಯದ ಕುರಿತು ಕುಟುಂಬದ ಸದಸ್ಯರ
ಎದುರು ಬಿಚ್ಚಿಟ್ಟಿದ್ದಾನೆ. ಈ ಮಧ್ಯೆ, ಚಿಟಗುಪ್ಪಾದ ಡಾ.ಅಬ್ದುಲ್ ಖುದ್ದೂಸ್ ಅವರು ಖದೀರ್ ಪರಿಸ್ಥಿತಿಯನ್ನು ಗಮನಿಸಿ ತಕ್ಷಣ ಕಲಬುರಗಿಯ ಸನ್‍ರೈಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ.
ಆದಾಗ್ಯೂ, ಖದೀರ್ ಸಂಬಂಧಿಕರು ಆತನನ್ನು ಬೀದರ್ ನಗರದ ಎರಡು
ಆಸ್ಪತ್ರೆಗಳಿಗೆ ಕರೆದೊಯ್ದಿದ್ದರು. ಪರಿಸ್ಥಿತಿಯ ಗಾಂಭೀರ್ಯತೆ ಅರಿತ ಅಲ್ಲಿನ
ವೈದ್ಯರು ಚಿಕಿತ್ಸೆ ನಿರಾಕರಿಸಿದ್ದಲ್ಲದೆ, ಹೈದರಾಬಾದ್ ನಗರಕ್ಕೆ ಕರೆದೊಯ್ಯುವಂತೆಸಲಹೆ ನೀಡಿದ್ದರು. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣಕ್ಕಾಗಿ ಕುಟುಂಬದ ಸದಸ್ಯರು ಆತನನ್ನು ಮಧ್ಯರಾತ್ರಿ 12.43ಕ್ಕೆ ಕಲಬುರಗಿಯ ಸನ್‍ರೈಸ್ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದಾರೆ.
ತುರ್ತು ಸ್ಕ್ಯಾನಿಂಗ್ ಕೈಗೊಂಡಾಗ ದೊಡ್ಡ ಕರುಳಿನಲ್ಲಿ ಸುಮಾರು 15 ಸೆಂ.ಮೀ.ಉದ್ದದ ಸ್ಟೀಲ್ ಗ್ಲಾಸ್ ಭದ್ರವಾಗಿ ಕುಳಿತಿರುವುದು ಪತ್ತೆಯಾಗಿದೆ. ಮತ್ತೊಂದೆಡೆ,ಅಷ್ಟೊತ್ತಿಗಾಗಲೇ ದೊಡ್ಡ ಕರುಳಿನಲ್ಲಿ ಊತ ಕಾಣಿಸಿಕೊಂಡಿದ್ದಲ್ಲದೆ, ಆಂತರಿಕ ರಕ್ತಸ್ರಾವ ಆರಂಭಗೊಂಡಿತ್ತು. ಇಷ್ಟರ ಮಧ್ಯೆಯೂ, ಗುದದ್ವಾರದ ಮೂಲಕವೇ ಗ್ಲಾಸ್ ಹೊರತೆಗೆಯುವ ಯತ್ನವನ್ನು ಆಸ್ಪತ್ರೆಯ ಲ್ಯಾಪ್ರೊಸ್ಕೋಪಿಕ್ ಮತ್ತು ರೋಬೊಟಿಕ್ ಸರ್ಜರಿ ಸ್ಪೆಷಲಿಸ್ಟ್ ಹಾಗೂ ಕ್ಯಾನ್ಸರ್ ತಜ್ಞರಾದ ಡಾ.ಅರುಣಕುಮಾರ್ ಬಾರಾಡ್ ನೇತೃತ್ವದ ತಂಡ ಕೈಗೊಳ್ಳಲು ಮುಂದಾದರೂ ಆನಿಟ್ಟಿನಲ್ಲಿ ಯಶಸ್ಸು ದೊರೆತಿರಲಿಲ್ಲ. ಮೇಲಾಗಿ, ಕ್ಷಣಕ್ಷಣಕ್ಕೂ ಖದೀರ್ ರಕ್ತದೊತ್ತಡ ಕುಸಿಯತೊಡಗಿತ್ತು. ಹೀಗಾಗಿ, ಹೆಚ್ಚು ವಿಳಂಬಕ್ಕೆ ಅವಕಾಶ ನೀಡದಂತೆ ಶಸ್ತ್ರಚಿಕಿತ್ಸೆ ಕೈಗೊಳ್ಳುವುದೇ ಸೂಕ್ತ ಎಂದು ಸನ್‍ರೈಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಲ್ಮಾನ್ ಪಟೇಲ್ ಅವರು ಸಲಹೆ ನೀಡಿದ್ದರು.
ಹಾಗಾಗಿ, ಆಗಸ್ಟ್ 28ರಂದು ಬೆಳಗ್ಗೆ 7ಕ್ಕೆ ಶಸ್ತ್ರಚಿಕಿತ್ಸೆ ಆರಂಭಿಸಲಾಯಿತು.
ಡಾ.ಅರುಣಕುಮಾರ್ ಬಾರಾಡ್, ಅರಿವಳಿಕೆ ತಜ್ಞರಾದ ಡಾ.ಮೊಹ್ಮದ್ ಹಸೀಬುದ್ದೀನ್ ಸೊಹೆರ್‍ವರ್ದಿಮತ್ತು ಇಂಟೆನ್ಸಿವಿಸ್ಟ್ ಡಾ.ರಜಾಕ್ ಅವರನ್ನು ಒಳಗೊಂಡ ವೈದ್ಯರ ತಂಡ ಎರಡುತಾಸುಗಳ ಸುದೀರ್ಘ ಯತ್ನದ ಬಳಿಕ ಗ್ಲಾಸ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.


ಹೇಗಿತ್ತು ಆಪರೇಷನ್?
ದೊಡ್ಡ ಕರುಳಿನಲ್ಲಿ ಸುಭದ್ರವಾಗಿ ಕುಳಿತಿದ್ದ ಸ್ಟೀಲ್ ಗ್ಲಾಸ್
ಹೊರತೆಗೆಯಬೇಕಾದರೆ ಮೊದಲು ಅಬ್ಡಮನ್ (ಕಿಬ್ಬೊಟ್ಟೆ) ಸೀಳಬೇಕಿತ್ತು. ಹೀಗಾಗಿ,ಕಿಬ್ಬೊಟ್ಟೆಯಲ್ಲಿ ಸುಮಾರು 6 ಸೆಂ.ಮೀ ಗಾತ್ರದ ರಂಧ್ರ ಮಾಡಿಕೊಂಡ ನಂತರ ನಿಧಾನವಾಗಿ ದೊಡ್ಡ ಕರುಳನ್ನು ಛೇದಿಸಿದ ಬಳಿಕ ಗ್ಲಾಸ್ ಹೊರತೆಗೆಯಲಾಗಿದೆ.ಕರುಳನ್ನು ಛೇದಿಸಿದ ಬಳಿಕ, ಅದು ತನ್ನ ಯಥಾರೂಪ ಪಡೆಯುವಂತೆ ಹೊಲಿಗೆಹಾಕಿದ್ದಲ್ಲದೆ, ಗುದದ್ವಾರದ ಹೊಸ್ತಿಲಿನಿಂದ ಹಿಡಿದು ಮೇಲ್ಭಾಗದ 20 ಸೆಂ.ಮೀ.ವರೆಗೆ
ಆಗುತ್ತಿದ್ದ ರಕ್ತಸ್ರಾವ ತಡೆಯಲು ಅಗತ್ಯ ಕ್ರಮಗಳನ್ನು
ಕೈಗೊಳ್ಳಬೇಕಾದರೆ ಸುಮಾರು ಎರಡು ತಾಸು ಬೇಕಾಯಿತು ಎಂದು ಕ್ಯಾನ್ಸರ್‍ತಜ್ಞರು ಹಾಗೂ ಲ್ಯಾಪ್ರೊಸ್ಕೋಪಿಕ್ ಮತ್ತು ರೋಬೊಟಿಕ್ ಸರ್ಜರಿ ಸ್ಪೆಷಲಿಸ್ಟ್ ಡಾ.ಅರುಣಕುಮಾರ್ ಬಾರಾಡ್ ಮಾಹಿತಿ ಹಂಚಿಕೊಂಡರು.ನಿಜಕ್ಕೂ ಇದೊಂದು ಅಪರೂಪದ ವಿದ್ಯಮಾನವಷ್ಟೇ ಅಲ್ಲ; ಶಸ್ತ್ರಚಿಕಿತ್ಸೆಗೆ ಒಳಗಾದವ್ಯಕ್ತಿಯ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯೂ ಇತ್ತು. ನಮ್ಮ ಆಸ್ಪತ್ರೆಯತಜ್ಞ ವೈದ್ಯರ ಸಮಯೋಚಿತ ನಿರ್ಧಾರದಿಂದಾಗಿ ಖದೀರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
-ಡಾ.ಸಲ್ಮಾನ್ ಪಟೇಲ್
ನಿರ್ದೇಶಕರು, ಸನ್‍ರೈಸ್ ಆಸ್ಪತ್ರೆ, ಕಲಬುರಗಿಗ್ಲಾಸನ್ನು ಗುದದ್ವಾರದ ಮೂಲಕ ಹೊಟ್ಟೆಯೊಳಗೆ ಇಳಿಸಿಕೊಂಡ ಈ ಪ್ರಕರಣನಿಜಕ್ಕೂ ಅಪರೂಪದ್ದಷ್ಟೇ ಅಲ್ಲ; ಆ ವ್ಯಕ್ತಿಯ ಜೀವಕ್ಕೂ ಅಪಾಯವಿತ್ತು. ದೇವರಆಶೀರ್ವಾದ ಮತ್ತು ನಮ್ಮೆಲ್ಲರ ಸಂಘಟಿತ ಪ್ರಯತ್ನದಿಂದ ಖದೀರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಡಾ.ಅರುಣಕುಮಾರ್ ಬಾರಾಡ್
    ಕ್ಯಾನ್ಸರ್ ತಜ್ಞರು, ಲ್ಯಾಪ್ರೊಸ್ಕೋಪಿಕ್ ಮತ್ತು
    ರೋಬೊಟಿಕ್ ಸರ್ಜರಿ ಸ್ಪೆಷಲಿಸ್ಟ್


ನನ್ನ ಪತಿಯ ಪ್ರಾಣವನ್ನು ಉಳಿಸುವ ನಿಟ್ಟಿನಲ್ಲಿ ಸನ್‍ರೈಸ್ ಆಸ್ಪತ್ರೆಯ ವೈದ್ಯರುತೋರಿದ ಕಾಳಜಿಗೆ ನಾನು ಜೀವನಪರ್ಯಂತ ಋಣಿಯಾಗಿರುತ್ತೇನೆ. ಆಸ್ಪತ್ರೆಯ ಎಲ್ಲವೈದ್ಯರಿಗೆ ನನ್ನ ಕುಟುಂಬದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.

  • ರಿಹಾನಾಬೇಗಂ
    ಖದೀರ್ ರಾಜೋಳೆವಾಳೆಯ ಪತ್ನಿ