
ಸಂಜೆವಾಣಿ ವಾರ್ತೆ
ಸಿರಿಗೇರಿ ಮೆ20. ಸಮೀಪದ ಗುಂಡಿಗನೂರು ಗ್ರಾಮದ ಶಿಫ್ಟಿಂಗ್ ವಿಲೇಜ್‍ನಲ್ಲಿ ಚರಂಡಿ ಕಾಮಗಾರಿ ನಡೆಯದೇ ನೆನೆಗುದಿಗೆ ಬಿದ್ದು, ನೂರಾರು ಕುಟುಂಬಗಳ ನಿವಾಸಿಗಳಿಗೆ ನಿತ್ಯ ನರಕ ಅನುಭವಿಸುವಂತಾಗಿದೆ. ಶಿಫ್ಟಿಂಗ್ ವಿಲೇಜ್‍ನಲ್ಲಿ ಸುಮಾರು 169 ಮನೆಗಳ ಪೈಕಿ 150 ಕುಟುಂಬಗಳವರು ಇಲ್ಲಿ ವಾಸಿಸುತ್ತಿದ್ದಾರೆ. 07 ಲೈನ್‍ಗಳಲ್ಲಿನ ಒಟ್ಟು ಮನೆಗಳ ಪೈಕಿಯಲ್ಲಿ 03 ಲೈನ್‍ಗಳಿಗೆ ಚರಂಡಿ ವ್ಯವಸ್ಥೆ ಮಾಡಲಾಗಿದೆ, ಇನ್ನೂ 4 ಲೈನ್‍ಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿಲ್ಲ, ಈ ಹಿಂದೆ ಚರಂಡಿ ನೀರು ಹರಿದು ಹೋಗಲು ಜೆಸಿಬಿ ಯಂತ್ರದಿಂದ ಚಿಕ್ಕ ಹರಿವಿನ ಕಾಲುವೆ ಮಾಡಲಾಗಿದೆ. ಆದರೆ ಸಿಸಿ ಚರಂಡಿ ಹಾಕಿಲ್ಲ. ಇದರಿಂದ ನೀರು ಹರಿದು ಹೋಗದೇ ಕಾಲುವೆ ತಗಿನಲ್ಲಿಯೇ ನಿಲ್ಲುತ್ತಿರುವದರಿಂದ ನಿವಾಸಿಗಳು ನಮ್ಮ ಮನೆ ಮುಂದೆ ಹರಿವು ಬೇಡ ಎನ್ನುವಂತೆ ವಾಸವಿಲ್ಲದವರ ಮನೆ ಪಕ್ಕದವರು ತಮ್ಮ ಮನೆ ಅಂಗಳಕ್ಕೆ ಸರಿಯಾಗಿ ಚರಂಡಿ ನೀರು ಹರಿಯದಂತೆ ತಡೆಒಡ್ಡುಗಳನ್ನು ಹಾಕಿಕೊಂಡಿದ್ದಾರೆ. ಇದರಿಂದ ತಡೆ ಹಾಕಿದಲ್ಲಿಕೊಳಚೆ ನೀರು ನಿಂತು ಗಬ್ಬು ವಾಸನೆ ಹೊಡೆಯುತ್ತಿದೆ ಎಂದು ನಿವಾಸಿಗಳು ಚರಂಡಿ ಮಾಡಿಸದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗುಂಡಿಗನೂರು ಗ್ರಾ.ಪಂ.ಸದಸ್ಯ ಪ್ರಕಾಶಗೌಡ ಎಂಬುವವರು ಈ ಕುರಿತು ಕಳೆದೆರಡು ವರ್ಷಗಳಿಂದ ಒತ್ತಾಯಿಸಿಕೊಂಡು ಬರಲಾಗುತ್ತಿದೆ ಕಾಮಗಾರಿ ನಡೆಯುತ್ತಿಲ್ಲವೆಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಈ ಸಮಸ್ಯೆ ಪರಿಹರಿಸುವಂತೆ ಕೇಳಿದರೆ ಕ್ರಿಯಾ ಯೋಜನೆ ಮಂಜೂರು ಆದ ಜಾಗದಲ್ಲಿ ಚರಂಡಿ ಮಾಡಿಸಲಾಗುವುದೆಂದು ಹೇಳುತ್ತಿದ್ದಾರೆ. ಮೊದಲಿಗೆ ಹೆಚ್ಚು ತೊಂದರೆ ಇರುವಲ್ಲಿ ಕಾಮಗಾರಿ ಕೈಗೊಳ್ಳಬೇಕೆಂದು ನನ್ನ ಒತ್ತಾಯವಾಗಿದೆ. ಈ ಕುರಿತು ಮಾನ್ಯ ಜಿಲ್ಲಾ ಪಂಚಾಯಿತಿ ಸಿಇಓ ಮತ್ತು ತಾ.ಪಂ. ಇಓ ಅಧಿಕಾರಿಗಳಲ್ಲಿ ಒತ್ತಾಯಿಸುತ್ತಿದ್ದೇನೆಂದು ತಿಳಿಸಿದರು. ಈ ಕುರಿತು ಮುದ್ದಟನೂರು ಪಿಡಿಓ ಪ್ರತಿಕ್ರೆಯೆ ನೀಡಿ ಚರಂಡಿ ಕಾಮಗಾರಿಗೆ ನರೇಗಾದಲ್ಲಿ ಅನುಮೋದನೆಯಾಗಿದ್ದು ಜೂನ್ ತಿಂಗಳಿನಿಂದ ಲೇಬರ್ ಒರಿಯಂಟೆಡ್ ಕೆಲಸಗಳಿಗೆ ಚಾಲನೆ ನೀಡಲಾಗುವುದೆಂದು ತಿಳಿಸಿದರು. ಒಟ್ಟಾರೆಯಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಜನರಿಗೆ ಸಮಸ್ಯೆ ಮಾಡದೇ ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
ಫೋಟೊ:- ಗುಂಡಿಗನೂರು ಗ್ರಾಮದ ಶಿಫ್ಟಿಂಗ್ ವಿಲೆಜ್‍ನಲ್ಲಿ ಚರಂಡಿ ಇಲ್ಲದೇ ತೊಂದರೆಯಾಗಿದೆ.