ಗುಂಡಿಕ್ಕಿ ನಾಲ್ವರು ಮಾವೋವಾದಿಗಳ ಹತ್ಯೆ

ರಾಯ್‌ಪುರ,ಫೆ.೨೮-ಛತ್ತೀಸ್‌ಗಢದ ಬಸ್ತಾರ್‍ನ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‍ನಲ್ಲಿ ನಾಲ್ವರು ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದೆ.ಬಸ್ತಾರ್‍ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಎಂಟು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ನಕ್ಸಲರ ಭದ್ರಕೋಟೆಗಳಿಗೆ ನುಗ್ಗು ಮಾವೋವಾದಿಗಳನ್ನು ಎಡೆಮುರಿ ಕಟ್ಟಿದ್ದಾರೆಬಿಜಾಪುರ ಜಿಲ್ಲಾ ಕೇಂದ್ರದಿಂದ ಸುಮಾರು ೩೦ ಕಿಮೀ ಮತ್ತು ರಾಯ್‌ಪುರದಿಂದ ೪೦೦ ಕಿಮೀ ದೂರದಲ್ಲಿರುವ ಬಡೇ ತುಂಗಾಲಿ ಮತ್ತು ಛೋಟೆ ತುಂಗಾಲಿ ಅರಣ್ಯಗಳಲ್ಲಿ ೪೦ರಿಂದ ೫೦ ಮಾವೋವಾದಿಗಳ ದೊಡ್ಡ ಗುಂಪು ಇರುವ ಬಗ್ಗೆ ಪೊಲೀಸರು ಗುಪ್ತಚರ ಮಾಹಿತಿ ಆಧರಿಸಿ ದಾಳಿ ಮಾಡಿ ನಾಲ್ವರು ನಕ್ಸಲರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.ಪಶ್ಚಿಮ ಬಸ್ತಾರ್ ವಿಭಾಗದ ಕಂಪನಿ ನಂ. ೨ರ ಪ್ಲಟೂನ್ ಕಮಾಂಡರ್ ಪ್ರಶಾಂತ್, ಮತ್ತವಾಡ ಸ್ಥಳೀಯ ಸ್ಕ್ವಾಡ್ ಕಮಾಂಡರ್ ಅನಿಲ್ ಪುಣೆ ಮತ್ತು ಭೈರಾಮ್‌ಗಢ್ ಏರಿಯಾ ಜನತಾ ಸರ್ಕಾರ್ ಅಧ್ಯಕ್ಷ ಎಸಿಎಂ ರಾಜೇಶ್ ಸೇರಿದಂತೆ ಕೆಲವು ಬಂಡುಕೋರ ಮಾವೋವಾದಿಗಳು ಗುಂಪಿನಲ್ಲಿದ್ದರು ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆಜಿಲ್ಲಾ ಮೀಸಲು ಪೊಲೀಸ್ ಪಡೆ, ಬಸ್ತಾರ್ ಫೈಟರ್ಸ್ ಮತ್ತು ಸಿಆರ್‍ಪಿಎಫ್‌ನ ಜಂಟಿ ತಂಡ ಮಾವೋವಾದಿಗಳನ್ನು ಬೆನ್ನತ್ತಿ ಹತ್ಯೆ ಮಾಡಿದೆ. ಭದ್ರತಾ ಪಡೆಗಳು ಮತ್ತು ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ತೀವ್ರ ಗುಂಡಿನ ಚಕಮಕಿ ನಂತರ ಮಾವೋವಾದಿಗಳು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆನಾಲ್ವರು ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಜಾಪುರ ಎಸ್ಪಿ ಜಿತೇಂದ್ರ ಕುಮಾರ್ ಖಚಿತಪಡಿಸಿದ್ದಾರೆ. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಬ್ಯಾರೆಲ್ ಗ್ರೆನೇಡ್ ಲಾಂಚರ್, ಪಿಸ್ತೂಲ್, ಮದ್ದುಗುಂಡುಗಳು, ಟಿಫಿನ್ ಬಾಂಬ್‌ಗಳು, ೧೦ ಜಿಲೆಟಿನ್ ಸ್ಟಿಕ್‌ಗಳು ಮತ್ತು ೧೫ ಮೀ ಸುರಕ್ಷತಾ ಫ್ಯೂಸ್‌ಗಳು ಸೇರಿವೆ. ೩೧೫ ದೇಶೀ ಆಯುಧಗಳಾದ ಚಾಕುಗಳು, ಕೊಡಲಿಗಳು ಸಹ ಪತ್ತೆಯಾಗಿವೆ ಎಂದು ಭದ್ರತಾ ಪಡೆಗಳು ತಿಳಿಸಿವೆ.