ಲಕ್ನೋ,ಜೂ.೨೭-ದರೋಡೆ, ಕೊಲೆ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ, ವ್ಯಕ್ತಿಯನ್ನು ಪೊಲೀಸ್ ಎನ್ಕೌಂಟರ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೃತನನ್ನು ೨೭ ವರ್ಷದ ಮುಹಮ್ಮದ್ ಗುಫ್ರಾನ್ ಎಂದು ಗುರುತಿಸಲಾಗಿದ್ದು, ಹಲವು ವರ್ಷಗಳಿಂದ ಪ್ರತಾಪ್ಗಢ ಮತ್ತು ಸುಲ್ತಾನ್ಪುರ ಜಿಲ್ಲೆಗಳಲ್ಲಿ ಅನೇಕ ಕೊಲೆ ಮತ್ತು ಡಕಾಯಿತಿ ಪ್ರಕರಣಗಳಿಗೆ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಕ್ರಿಮಿನಲ್ ಸುಳಿವು ಕೊಟ್ಟವರಿಗೆ ಪೊಲೀಸರು ೧,೨೫,೦೦೦ ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು
ಇಂದು ಮುಂಜಾನೆ ೫ ಗಂಟೆ ಸುಮಾರಿಗೆ ಮಂಜನ್ಪುರದ ಸಮದಾ ಸಕ್ಕರೆ ಕಾರ್ಖಾನೆ ಬಳಿ ವಿಶೇಷ ಕಾರ್ಯಪಡೆ ತಂಡ ದಾಳಿ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಕೌಶಂಬಿ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಪೊಲೀಸರ ಮೇಲೆ ಗುಂಡು ಹಾರಿಸಿದ್ದು ಇದಕ್ಕೆ ಪ್ರತಿಯಾಗಿ ಪೊಲೀಸರು ಪ್ರತಿದಾಳಿ ನಡೆಸಿದರು ಮತ್ತು ನಂತರದ ಕ್ರಾಸ್-ಫೈರ್ನಲ್ಲಿ ಅವರು ಗುಂಡು ಹಾರಿಸಿದರು.ತೀವ್ರ ಗಾಯಗೊಂಡ ಗುಫ್ರಾನ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿರಾದರೂ ಅತ ಅಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಉಪ ಪೊಲೀಸ್ ವರಿಷ್ಠಾಧಿಕಾರಿ, ಎಸ್ಟಿಎಫ್, ಧರ್ಮೇಶ್ ಕುಮಾರ್ ಶಾಹಿ, “ಇಂದು ಬೆಳಿಗ್ಗೆ ಲಕ್ನೋ ಎಸ್ಟಿಎಫ್ ಸಮದಾ ಪ್ರದೇಶದಲ್ಲಿ ಎನ್ಕೌಂಟರ್ ನಡೆಸಿದೆ, ಘಟನೆಯ ವೇಳೆ ದರೋಡೆಕೋರನೊಬ್ಬ ಗುಂಡು ಹಾರಿಸಿದ್ದಾನೆ, ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಮೃತ ಗುಫ್ರಾನ್ ವಿರುದ್ಧ ಪ್ರತಾಪಗಢ ಪೊಲೀಸ್ ಠಾಣೆಯಲ್ಲಿ ೧೩ ಕೊಲೆ ಮತ್ತು ಲೂಟಿ ಪ್ರಕರಣಗಳಿದ್ದವು