ಗುಂಡಿಕ್ಕಿ ಇಬ್ಬರು ನಕ್ಸಲರ ಹತ್ಯೆ

ರಾಯ್‌ಪುರ,ಮಾ.೨೪- ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಸ್ತಾರ್ ವಿಭಾಗದ ದಾಂತೇವಾಡ ಮತ್ತು ಬಿಜಾಪುರದ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ ಇಬ್ಬರು ಮಾವೋವಾದಿಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದ್ದು ಕಳೆದ ಮೂರು ತಿಂಗಳಲ್ಲಿ ೩೧ ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಕಳೆದ ವರ್ಷ ಡಿಸೆಂಬರ್‍ನಲ್ಲಿ ವಿಷ್ಣು ದೇವ್ ಸಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕನಿಷ್ಠ ೩೧ ಮಾವೋವಾದಿಗಳು ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ. ಕೇವಲ ಮೂರು ತಿಂಗಳ ಅವಧಿಯಲ್ಲಿ, ಮಾವೋವಾದಿಗಳ ದೇಹಗಳ ಸಂಖ್ಯೆ ೩೧ ದಾಟಿದೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ
ಮಾರ್ಚ್ ತಿಂಗಳೊಂದರಲ್ಲೇ ಹನ್ನೊಂದು ಮಾವೋವಾದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪ್ರತಿ ವರ್ಷ ಫೆಬ್ರವರಿ ಮತ್ತು ಜೂನ್ ನಡುವೆ ದಂಗೆಕೋರರ “ಯುದ್ಧತಂತ್ರದ ಪ್ರತಿ-ಆಕ್ರಮಣಕಾರಿ ಅಭಿಯಾನ ಸಮಯದಲ್ಲಿ ಮಾವೋವಾದಿಗಳನ್ನು ಎಡೆ ಮುರಿ ಕಟ್ಟಲು ಹೋರಾಟ ನಡೆಸಿದ್ದರು
ಭದ್ರತಾ ಪಡೆಗಳು ಮಾವೋವಾದಿಗಳ ವಿರುದ್ದ ಸಮರ ಸಮರ ಸಾರಿದ್ದು ಪ್ರಮುಖ ನಕ್ಸಲ್ ನಾಯಕರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ
ಸಿಆರ್‍ಪಿಎಫ್, ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ -ಕೋಬ್ರಾ, ವಿಶೇಷ ಕಾರ್ಯಪಡೆ -ಎಸ್‌ಟಿಎಫ್, ಬಸ್ತಾರ್ ಫೈಟರ್ಸ್ ಮತ್ತು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್‌ಗಳ -ಡಿಆರ್‍ಜಿಯ ನೂರಾರು ಭದ್ರತಾ ಸಿಬ್ಬಂದಿಗಳು ಬಿಜಾಪುರ ಜಿಲ್ಲೆಯ ಗಂಗಲೂರು ಮತ್ತು ಮುತ್ವಂಡಿಯ ಶಿಬಿರಗಳಿಂದ ಮಾವೋವಾದಿಗಳ ದೊಡ್ಡ ಗುಂಪು ಖಚಿತ ಮಾಹಿತಿ ಆಧರಿಸಿ ನಕ್ಸಲರನ್ನು ಹತ್ಯೆ ಮಾಡಿದೆ
ಮಾವೋವಾದಿಗಳ ದಾಳಿಗೆ ಪ್ರತಿಯಾಗಿ ಭದ್ರತಾ ಪಡೆಗಳೂ ದಾಳಿ ನಡೆಸಿದ್ದು ಈ ವೇಳೆ ಇಬ್ಬರು ಮಾವೋವಾದಿಗಳು ಹತ್ಯೆಯಾಗಿದ್ದಾರೆ. ಜನವರಿ ೧ ರಿಂದ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಕನಿಷ್ಠ ೨೬ ಎನ್‌ಕೌಂಟರ್‌ಗಳು ಮತ್ತು ೭೪ ನಕ್ಸಲ್ ಸಂಬಂಧಿತ ಘಟನೆಗಳು ನಡೆದಿವೆ. ಬಸ್ತಾರ್ ವಿಭಾಗದ ಏಳು ಜಿಲ್ಲೆಗಳಲ್ಲಿ, ಬಿಜಾಪುರ ವಲಯದಲ್ಲಿ ಮೂರು ತಿಂಗಳೊಳಗೆ ಗರಿಷ್ಠ ೧೦ ಗುಂಡಿನ ಚಕಮಕಿಗಳನ್ನು ಕಂಡಿದೆ, ಎಂಟು ಮಾವೋವಾದಿಗಳು ಹತ್ಯೆಯಾಗಿದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ.