ಗುಂಡಯ್ಯಾ ಎಸ್ ತೀರ್ಥಾ ಶಿಕ್ಷಕರ ಬಿಳ್ಕೋಡುಗೆ

(ಸಂಜೆವಾಣಿ ವಾರ್ತೆ)
ಹುಮನಾಬಾದ : ಆ.2:ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿ. ಶಿಸ್ತು, ಸಂಸ್ಕøತಿ ವಿಧ್ಯಾಪೀಠ ಸಂಸ್ಥೆಯಲ್ಲಿ ಕಂಡುಬರುತ್ತಿದೆ ಎಂದು ಬೀದರ ಗುರು ದೇವ ಆಶ್ರಮದ ಗಣೇಶಾನಂದ ಮಹಾರಾಜರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಬಸವತೀರ್ಥ ವಿಧ್ಯಾಪೀಠ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಯೋನಿವ್ರತಿ ಹೊಂದಿರುವ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಗುಂಡಯ್ಯಾ ಎಸ್ ತೀರ್ಥಾ ಹಾಗೂ ಸಹ ಶಿಕ್ಷಕರಾದ ಶಿವರಾಜ ಡಿ ಸಾಲಿ ಮತ್ತು ಮದುಕರ್ ಕೆ ದೇಶಪಾಂಡೆ ಬೀಳ್ಕೋಡುಗೆ ಕಾರ್ಯಕ್ರಮದ ಮಾತನಾಡುತ ನುಡಿದರು. ಬಸವತೀರ್ಥ ವಿಧ್ಯಾಪೀಠ ಸಂಸ್ಥೆ ಪ್ರಾಥಮಿಕ ದಿಂದ ಡಿಗ್ರಿ ವರೆಗೆ ಒಳ್ಳೆಯ ಗುಣ ಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಈ ಸಂಸ್ಥೆಯ ಪ್ರಾಥಮಿಕ ಶಾಲೆ ಆರಂಭದಿಂದಲು ಗುಂಡಯ್ಯಾ ತೀರ್ಥಾ ಹಾಗೂ ಸಹ ಶಿಕ್ಷಕರಾದ ಶಿವರಾಜ ಡಿ ಸಾಲಿ ಹಾಗೂ ಮಧುಕರ ದೇಶಪಾಂಡೆ ಇವರುಗಳು ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಶಾಲಾ ಮುಖ್ಯಗುರುಗಳಾದ ಗುಂಡಯ್ಯಾ ತೀರ್ಥ ಅವರು ಸಂಸ್ಥೆಯ ಉನ್ನತಿಗೆ ಹಗಲಿರುಳು ಶ್ರಮಿಸುದ್ದಾರೆ. ಇವರ ಸೇವೆಯನ್ನು ಗುರುತಿಸಿ ಸಂಸ್ಥೆಯವರು ಆಡಳಿತಾಧಿಕಾರಿಯಾಗಿ ನೇಮಕ ಮಾಡಿದು ಸಂತಸ ತಂದಿದೆ ಎಂದು ಗಣೇಶಾನಂದ ಮಹಾರಾಜರು ತಿಳಿಸಿದರು. ಕೇಂದ್ರ ಸಮಿತಿಯ ಕಾರ್ಯಧ್ಯಕ್ಷರಾದ ಕೇಶವರಾವ ತಳಘಟಕರ್ ಮಾತನಾಡಿ ನಮ್ಮ ಶಾಲೆಯ ಶಿಕ್ಷಕರು ಅತ್ಯಂತ ಕಾಳಜಿ ಪೂರ್ವಕವಾಗಿ ಶ್ರಮ ವಹಿಸಿರುವದರಿಂದ ಶಾಲೆಗೆ ಇಷ್ಟು ಕೀರ್ತಿ ಬಂದಿದೆ ಎಂದು ನುಡಿದರು. ಕಂಟೆಪ್ಪಾ ದಾನಾ ಅವರು ಮಾತನಾಡಿ ಇಂದಿನ ಸನ್ಮಾನಿತರು 38 ವರ್ಷಗಳಕಾಲ ಸೇವೆ ಸಲ್ಲಿಸಿದ್ದು ಸಾಕ್ಷಾತ್ ನಮ್ಮ ಕಣ್ಣಮುಂದೆ ಇದೆ ಎಂದು ನುಡಿದರು. ಪುರಸಭೆ ಅಧ್ಯಕ್ಷರಾದ ನಾಗರಾಜ ಹಿಬಾರೆ, ಮಾÀಜಿ ಪುರಸಭೆ ಅಧ್ಯಕ್ಷ ಮಾಹಾಂತಯ್ಯ ತೀಥ ಕೋಶಾಧ್ಯಕ್ಷರಾದ ಬಸವರಾಜ ಪಾಟೀಲ್ ಕಮಾಲಪೂರ ಅವರು ಮಾತನಾಡಿದರು ಸುಭಾಷ ಮೀನಕೇರಿ, ಶಂಕರ ಗಂಗಾ ಪಾಟೀಲ, ಬಸವರಾಜ ಬೊಮ್ಮ, ಶಶಿಕಾಂತ ಗಂಗಶ್ರೀ, ಡಾ ವಿರೇಂದ್ರ ಪಾಟೀಲ್, ರಮೇಶ ಮಹೇಂದ್ರಕರ್, ಶಿವಕುಮಾರ ತೀರ್ಥಾ, ಕಾಶಿನಾಥ ಕೂಡ್ಲಿ, ಮಹಾದೇವಪ್ಪಾ ಕಾವಡಿ, ರಾಜಶೇಖರ ಪಾಟೀಲ, ರಾಜಶೇಖರ ಸಿರಶೆಟ್ಟಿ, ಗುಂಡಪ್ಪಾ ಮುಲಗೆ, ಅಪ್ಪರಾವ ಹಾಲಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಂಸ್ಕೃತಿಕ ಚಟುವಟಿಕೆಗಳು ಪ್ರದರ್ಶಿಸಲಾಯಿತು.
ವಿಧ್ಯಾರ್ಥಿನಿ ಸಿಂಚನಾ ಮತ್ತು ಸಂಗಡಿಗರಿಂದ ಪ್ರಾರ್ಥನೆ ಗೀತೆ ಜರುಗಿತು. ಸಪ್ನಾ ಸಂಗಡಿಗರು ಸ್ವಾಗತಗೀತೆ ಹಾಡಿದರು. ಪ್ರಾಚಾರ್ಯರು ಮಸ್ತಾನ ಪಟೇಲ್ ಸ್ವಾಗತ ಭಾಷಣ ಮಾಡಿದರು. ಮುಖ್ಯಗುರುಗಳಾದ ಚಂದ್ರಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಸಂಗಪ್ಪಾ ಪಾಟೀಲ ಕಾರ್ಯಕ್ರಮ ನೀರೂಪಿಸಿದರು. ಬಸವರಾಜ ಝರಕುಂಟೆ ಕೊನೆಯಲ್ಲಿ ವಂದಿಸಿದರು.