ಗುಂಡಗತ್ತಿ ಆಂಜನೇಯ ಸ್ವಾಮಿ ರಥೋತ್ಸವ

ಹರಪನಹಳ್ಳಿ.ಏ.11: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಗುಂಡಗತ್ತಿ ಆಂಜನೇಯ ಸ್ವಾಮಿ ರಥೋತ್ಸವ ನೆರವೇರಿತು.ಅಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮಿ ದೇವರ ವಿಗ್ರಹ ಪ್ರತಿಷ್ಠಾಪಿಸಿ, ಕೆರೆ ಪಕ್ಕದಲ್ಲಿರುವ ತೇರುಬೀದಿಗೆ ಸಕಲ ವಾದ್ಯ ಮೇಳಗಳ ಮೆರವಣಿಗೆ ಮೂಲಕ ಕರೆ ತರಲಾಯಿತು. ದಾರಿಯುದ್ದಕ್ಕೂ ಆಂಜನೇಯ ಸ್ವಾಮಿಗೆ ಜೈಕಾರ– ಘೋಷಣೆಗಳನ್ನು ಕೂಗಲಾಯಿತು.ದೇವರಪಲ್ಲಕ್ಕಿ ಹೊತ್ತ ಭಕ್ತರು ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.ಹರಾಜು ಪ್ರಕ್ರಿಯೆ ಬಳಿಕ ರಥವನ್ನು ಎಳೆಯುತ್ತಿದ್ದಂತೆಯೇ ನೆರೆದವರು ಬಾಳೆಹಣ್ಣು ಎಸೆದು ಭಕ್ತಿ ಸಲ್ಲಿಸಿದರು.