ಗುಂಜಳ್ಳಿ : ಶಾಶ್ವತ ಕುಡಿವ ನೀರಿನ ವ್ಯವಸ್ಥೆಗೆ ಆದ್ಯತೆ

ರಾಯಚೂರು.ಜ.೦೪- ಇಂದು ಗುಂಜಳ್ಳಿ ಗ್ರಾಮದಲ್ಲಿ, ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ವತಿಯಿಂದ ೧.೪೫ ಕೋಟಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಪೈಪ್ ಲೈನ್ ಮತ್ತು ಪ್ರತಿ ಮನೆಗೆ ವೈಯಕ್ತಿಕ ನಳಗಳ ಸಂಪರ್ಕ ನೀಡುವ ಕಾಮಗಾರಿಗೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ರವರು ಭೂಮಿ ಪೂಜೆ ನೆರೆವೇರಿಸಿದರು.
ಮತ್ತು ಆರೋಗ್ಯ ಇಲಾಖೆಯ ವತಿಯಿಂದ ೧ ಕೋಟಿ ರೂ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವಸತಿ ಗೃಹ ಉದ್ಘಾಟನೆ ಮಾಡಿದರು. ೧೪. ಲಕ್ಷ ರೂ.ಗಳ ವೆಚ್ಚದಲ್ಲಿ ಹಂಚಿನಾಳ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಪೈಪ್ ಲೈನ್ ಮತ್ತು ಪ್ರತಿ ಮನೆಗೆ ವೈಯಕ್ತಿಕ ನಳಗಳ ಸಂಪರ್ಕ ಕಲ್ಪಿಸುವ ಕಾಮಗಾರಿಯ ಭೂಮಿ ಪೂಜೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಮನೆಗಳಿಗೆ ಶಾಶ್ವತವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಅನವಶ್ಯಕವಾಗಿ ನೀರನ್ನು ಪೋಲು ಮಾಡದೆ, ಮಿತ ಬಳಕೆ ಮಾಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಶರತ್ ಚಂದ್ರ ರೆಡ್ಡಿ, ಹರಿಚಂದ್ರರೆಡ್ಡಿ, ಶ್ರೀನಿವಾಸ್, ದಶರಥ ರೆಡ್ಡಿ, ಮಲ್ಲಿಕಾರ್ಜುನ ಗೌಡ, ಸತ್ಯ ರೆಡ್ಡಿ, ಕಿಶೋರ್ ಕುಮಾರ್, ಜನಾರ್ಧನ ಗೌಡ, ಕರಿಯಪ್ಪ, ನೂತನ ಗ್ರಾಮ ಪಂಚಾಯಿತಿ ಸದಸ್ಯರು ಊರಿನ ಮುಖಂಡರು, ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.