ಗುಂಜಳ್ಳಿ ಪಿಡಿಓ ವರ್ಗಾವಣೆ ರದ್ದಿಗೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು,ಜು.೧೪- ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನು ಜಿಲ್ಲಾ ಪಂಚಾಯತಿಗೆ ವರ್ಗಾವಣೆ ಮಾಡಿದ ಆದೇಶವನ್ನು ಹಿಂಪಡೆದು ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಗುಂಜಳ್ಳಿ ಸಾರ್ವಜನಿಕರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನು ಜಿಲ್ಲಾ ಪಂಚಾಯತಿಗೆ ವರ್ಗಾವಣೆ ಮಾಡಿದ್ದು,ಕೂಡಲೇ ಹಿಂಪಡೆಯಬೇಕು. ಈ ಹಿಂದೆ ಅಧಿಕಾರಿಗಳು ಉದ್ಯೋಗ ಖಾತರಿ ಯೋಜನೆಯಲ್ಲಿ ಜನರಿಗೆ ಕೆಲಸ ನೀಡದೆ ಹಣವನ್ನು ಲೂಟಿ ಮಾಡಿದ್ದರು.ಆದರೆ ಸದರಿ ಪಿಡಿಓ ಅವರು ಜನರಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸವನ್ನು ನೀಡಿದ್ದಾರೆ.ಇದನ್ನು ಸಹಿಸಲಾಗದ ಗ್ರಾಮ ಪಂಚಾಯತ್ ಸದಸ್ಯರು ಶಾಸಕ ಬಸನಗೌಡ ದದ್ದಲ್ ಅವರು ಮೂಲಕ ಇವರನ್ನು ವರ್ಗಾವಣೆ ಮಾಡಿಸಿದ್ದಾರೆ ಕೂಡಲೇ ಇವರ ವರ್ಗಾವಣೆಯನ್ನು ರದ್ದುಪಡಿಸಿ ಮತ್ತೆ ಅದೇ ಪಂಚಾಯತ್ ನಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.