ಗುಂಜಬಬಲಾದ ಸ.ಹಿ ಶಾಲೆಯಲ್ಲಿ ಅರಳಿದ ಪೌಷ್ಟಿಕ ಕೈ ತೋಟ, ಇತರೆ ಶಾಲೆಗಳಿಗೆ ಮಾದರಿಯಾಗಲಿ

ಆಳಂದ:ಡಿ.7: ತಾಲ್ಲೂಕಿನ ಸರಕಾರಿಮ ಹಿರಿಯ ಪ್ರಾಥಮಿಕ ಶಾಲೆ ಗುಂಜಬಬಲಾದಲ್ಲಿ 2021-22ನೇ ಸಾಲಿನ ಮಹಾತ್ಮಾ ಗಾಂಧೀ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೋಟಗಾರಿಕಾ ಇಲಾಖೆ ಆಳಂದ ಇವರ ನೇತೃತ್ವದಲ್ಲಿ ಪೌಷ್ಟಿಕ ಕೈ ತೋಟ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ.

ಒಟ್ಟು 1500 ಚ.ಮೀ. ವಿಸ್ತೀರ್ಣಾದಲ್ಲಿ ರೂ. 33,803 ರೂ. (ಕೂಲಿ 28,748 ರೂ ಮತ್ತು ಸಾಮಗ್ರಿ 11,056 ರೂ) ವೆಚ್ಚ ಅಂದಾಜು ಮೊತ್ತದಲ್ಲಿ ವಿವಿಧ ಬಗೆಯ ತರಕಾರಿ ಮತ್ತು ಹಣ್ಣಿನ ಸಸಿಗಳಾದ ಮಾವು , ಪೈರು, ಡ್ರೈಗನ್ ಪೂಡ್ಸ್ , ಬಾರೇ, ಬಾಳಿ, ಪಪ್ಪಾಯಿ, ಸೀತಾ ಪಲ, ನಿಂಬೆ, ನುಗ್ಗಿ ಕರಿ ಬೇವು) ಮತ್ತು ವಿವಿಧ ಬಗ್ಗೆಯ ತರಕಾರಿ ಸೋಪುಗಳಾದ ಪಾಲಕ ರಾಜಗೀರಿ, ಮೈಂತಿ, ಸಬಸಗಿ, ಪುಂಡಿ, ಕೋತಂಬರಿ, ಬೇಂಡೆ, ಚವಳಿ, ಸವತೆ, ಹೀರಿಕಾಯಿ, ಕುಂಬಳಕಾಯಿ, ಹಾಗಲಕಾಯಿ, ಟೋಮಾಟೋ, ಮೇಣಸಿನಕಾಯಿ, ಬದನೆ ಇತ್ಯಾದಿ ತರಕಾರಿಗಳನ್ನು ನರೇಗಾ ಕೂಲಿ ಕಾರ್ಮಿಕರ ನೆರವಿನೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ.

ಸದರಿ ಶಾಲೆ ಆವರಣ ಬೆಳಿ ವ್ಯವಸ್ಥೆ ಕಲ್ಪಿಸಲಾಗಿದ್ದು. ಕೈ ತೋಟಕ್ಕೆ ದನ ಕರು ಮತ್ತು ಇತರೆ ಪ್ರಾಣಿಗಳಿಂದ ರಕ್ಷಣೆ ಒದಗಿಸಲಾಗಿದೆ. ಈ ಶಾಲೆಯಲ್ಲಿ ಉತ್ತಮ ನೀಇನ ವ್ಯವಸ್ಥೆ ಕಲ್ಪಿಸಲಾಗಿದೆ. ನರೇಗಾ ಕೂಲಿ ಕಾರ್ಮಿಕರು ಕೈ ತೋಟದಲ್ಲಿ ನೀರು ಉಣ್ಣಿಸುವುದು ಬೆಳೆಗಳ ಮಧ್ಯೆ ಕಸ ತೆಗೆಯುವುದು, ಅಗತ್ಯವಿದ್ದಲ್ಲಿ ರೋಗ ಕೀಟ ಬಾಧೆಗಳಿಗೆ ಸೂಕ್ತ ಹತೋಟ ಕ್ರಮ ಕೈಗೊಂಡ ಸೂಚಿಯಾಗಿರುವಂತೆ ಕ್ರಮ ಕೈಗೊಳ್ಳುತ್ತಿದ್ದಾರೆ. ಶಾಲೆಯ ಮಕ್ಕಳು ಕೂಡಾ ಬಿಡುವಿನ ವೇಳಯಲ್ಲಿ ಕೈ ತೋಟಕ್ಕೆ ಭೇಟಿ ನೀಡಿ ನೀರು ಉಣ್ಣಿಸುವುದು , ಕಸ ತೆಗೆಯುವುದು ಸೋಪು ಕಟಾವು ಮಾಡುವ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಮತ್ತು ತರಕಾರಿ ಬೆಳೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ.

ಶಾಲೆಯ ಮುಖ್ಯ ಗುರುಗಳು, ತೋಟಗಾರಿಕೆ ಹಿರಿಯ ಅಧಿಕಾರಿಗಳು ಸ್ಥಳೀಯ ಎಸ್‍ಡಿಎಂಸಿ ಅಧ್ಯಕ್ಷರು, ಆರ್.ಡಿ.ಪಿ.ಆರ್ ಅಧಿಕಾರಿಗಳು ಮತ್ತು ಪೋಷಕರು ಈ ಕೈ ತೋಟ ಅಭಿವೃದ್ಧಿಗೆ ಕಾಲಾ ಕಾಲಕ್ಕೆ ಬೇಕಾಗುವ ಅಗತ್ಯ ಮಾಹಿತಿ ಮತ್ತು ನೆರವು ಸಲಹೆಗಳನ್ನು ನೀಡುತ್ತಾರೆ. ಒಟ್ಟಾರೆಯಾಗಿ ಈ ತೋಟದಿಂದ ಬೆಳೆದ ತರಕಾರಿಗಳನ್ನು ಬಿಸಿಯುಟಕ್ಕೆ ಬಳಸಿ ಶುಚಿಯಾದ ರುಚಿಯಾz ಆಹಾರವನ್ನು ಮತ್ತು ಹಣ್ಣುಗಳನ್ನು ಮಕ್ಕಳು ಸೇವಿಯಲು ಅನುಕೂಲವಾಗಿದೆ. ಇದ್ದರಿಂದ ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪೌಷ್ಟಿಕ ನಿವಾರಣೆಯ್ತತ ಹೆಜ್ಜೆ ಇಡಲು ಈ ಶಾಲೆ ಮಾದರಿಯಾಗಿದೆ.


ಅಪೌಷ್ಟಿಂಕತೆ ನಿರ್ವಹಣೆ ಮಾಡಿ ಪೌಷ್ಟಿಕ ತರಲು ಬಿಸಿಯೂಟದಲ್ಲಿ ಮಕ್ಕಳಿಗೆ ತರಕಾರಿ ಬೆಳೆದು ಸ್ವಚ ಅಡುಗೆ ಹಾಗೂ ಪೌಷ್ಟಿಕತೆ ತರಲು ಈ ಯೋಜನೆ ಸಹಾಕರಿಯಾಗಿದೆ.

ನಾಗಮೂರ್ತಿ ಶೀಲವಂತ, ಇಓ, ತಾ.ಪಂ ಆಳಂದ

ನರೇಗಾ ಯೋಜನೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಪೌಷ್ಟಿಕ ಕತೆಯ ಕ ತೋಟ ಮಾಡಿದರೆ ಇಲಾಖೆಯಿಂದ ಎಲ್ಲಾ ಸೌಲಬ್ಯ ಒದಗಿಸಲಾಗುವುದು.

ಶಂಕರಗೌಡ, ಹಿರಿಯ ತೋಟಗಾರಿಕೆ ಅದಿಕಾರಿಗಳು , ಆಳಂದ

ನರೇಗಾ ಯೋಜನೆ ಅಡಿ ಕೈ ತೋಟ ಮಾಡಲು ಸಹಕಾರಿಯಾಗಿದೆ. ಈ ವರ್ಷ ಪ್ರಾರಂಭ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಬಿಸಿಯೂಟಕ್ಕೆ ಬೇಕಾಗುವ ತರಕಾರಿಗಳನ್ನು ಶಾಲೆಗಳಲ್ಲಿ ಬೆಳೆದು ಪೌಷ್ಟಿಕ ಆಹಾರ ಬೆಳೆಸುತ್ತೇವೆ.

ನಿಂಗಪ್ಪ, ಮುಖ್ಯಗುರು, ಸ.ಹಿ.ಶಾಲೆ ಗುಂಜಬಬಲಾದ