ಗೀತಾ ಶಂಕರ್ ಮತಯಾಚನೆ

ರಾಮನಗರ:ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ತಾವು ಡಾ.ಅಪ್ಪಾಜಿಗೌಡ ಹಾಗೂ ಡಾ.ನಿಸರ್ಗ ಸಿಂಡಿಕೇಟ್ ನ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ತಮನ್ನು ಬೆಂಬಲಿಸಿ ಮತ ನೀಡುವಂತೆ ನಿರ್ದೇಶಕ ಸ್ಥಾನದ ಅಭ್ಯರ್ಥಿ ಗೀತಾ ಶಂಕರ್ ಅವರು ವಿನೂತನವಾಗಿ ಮತ ಯಾಚನೆ ನಡೆಸಿದರು.
ನಗರದ ಹೊರವಲಯದ ಜಾನಪದ ಲೋಕದ ಬಳಿಯ ಕಾಮತ್ ಹೋಟೆಲ್ ನಲ್ಲಿ ಒಕ್ಕಲಿಗ ಸಮುದಾಯದ ಮಹಿಳೆಯರನ್ನು ಒಗ್ಗೂಡಿಸಿದ ಗೀತಾ ಶಂಕರ್ ಅವರು, ತಮ್ಮನ್ನು ಬೆಂಬಲಿಸಲು ಕೋರುವ ಮೂಲಕ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದರು.
ತಾವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡದ್ದು ಬಡಬಗ್ಗರ ಸೇವೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿ ಒಕ್ಕಲಿಗ ಸಮುದಾಯದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಅಲ್ಲದೇ ತಾವು ನಿರ್ದೇಶಕರಾಗಿ ಆಯ್ಕೆಗೊಂಡಲ್ಲಿ ಸಮುದಾಯದ ತಳಮಟ್ಟದ ಜನರಿಗೆ ನ್ಯಾಯ ಒದಗಿಸುವ ಜೊತೆಗೆ ಜನಾಂಗದ ಸರ್ವತೋಮುಖ ಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಒಕ್ಕಲಿಗರಿಗೂ ಹಲವು ಸವಲತ್ತು ಪಡೆಯಲು ಅವಕಾಶವಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಲು ತಾವು ನೆರವು ನೀಡುವುದಾಗಿ ತಿಳಿಸಿದರು.
ಕಿಮ್ಸ್ ಆಸತ್ರೆಯಲ್ಲಿ ಚಿಕಿತ್ಸೆಯ ವೆಚ್ಚದ ರಿಯಾಯಿತಿ ಇರಬಹುದು, ಬಡ ವಿದ್ಯಾರ್ಥಿಗಳ ಓದಿಗಾಗಿ ದೊರೆಯುವ ಸವಲತ್ತನ್ನು ನ್ಯಾಯಯುತವಾಗಿ ಒದಗಿಸುವ ಭರವಸೆಯನ್ನು ಇದೇ ವೇಳೆ ಗೀತಾ ಶಂಕರ್ ನೀಡಿದರು.