ಗೀತಾ ಚಿದ್ರಿ ಹುಮನಾಬಾದ್ ಕ್ಷೇತ್ರ ಉಸ್ತುವಾರಿ

ಬೀದರ್: ಜು.31:ಜಿಲ್ಲೆಯವರೇ ಆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೀತಾ ಪಂಡಿತರಾವ್ ಚಿದ್ರಿ ಅವರನ್ನು ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಅಭಿನಂದನೆ: ಹುಮನಾಬಾದ್‍ನಲ್ಲಿ ಶಾಸಕ ರಾಜಶೇಖರ ಪಾಟೀಲ ಅವರು ಗೀತಾ ಚಿದ್ರಿ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಈ ವೇಳೆ ಗೀತಾ ಚಿದ್ರಿ ಹಾಗೂ ಶಾಸಕರು ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲವರ್ಧನೆ ಕುರಿತು ಚರ್ಚೆ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಮುಖಂಡರಾದ ಅಫ್ಸರಮಿಯಾ, ಅಶೋಕ ದುಬಲಗುಂಡೆ, ಶಿವರಾಜ ಚೀನಕೇರಿ, ಪ್ರಕಾಶ ಕಾಡಗೊಂಡ ಮತ್ತಿತರರು ಇದ್ದರು.