ಗೀತಾ ಅಭಿಯಾನ

ಕೆಂಭಾವಿ:ಡಿ.9:ಗೀತೆಯಲ್ಲಿನ ಶ್ಲೋಕಗಳನ್ನು ನಿತ್ಯ ಪಠಿಸುವುದರಿಂದ ಮಾನಸಿಕ ಮತ್ತು ದೈಹಿಕ ಸಮೃದ್ಧತೆ ಪಡೆಯಲು ಸಾದ್ಯವಾಗುತ್ತದೆ ಎಂದು ಪತ್ರಕರ್ತ ರಾಘವೇಂದ್ರ ಕಾಮನಟಗಿ ಹೇಳಿದರು.

ಸಮೀಪದ ಕೂಡಲಗಿಯಲ್ಲಿ ಗೀತಾಜಯಂತಿ ನಿಮಿತ್ಯ ಹಮ್ಮಿಕೊಂಡ ಗೀತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸನಾತನ ಧರ್ಮ ಎಂದರೆ ಅದು ಮೂಲ ಧರ್ಮ, ಅದು ಮಾನವತಾ ಧರ್ಮ ಸನಾತನ ಧರ್ಮಿಯರೆಲ್ಲರೂ ಗೀತಾ ಜಯಂತಿಯನ್ನು ಆಚರಿಸುವಂತಾಗಬೇಕು. ಮಹಾಭಾರತದ ಯುದ್ದ ಸಂದರ್ಭದಲ್ಲಿ ಶ್ರೀ ಕೃಷ್ಣನು ತನ್ನ ಮಿತ್ರ ಹಾಗೂ ಭಕ್ತ ಅರ್ಜುನನಿಗೆ ನಿಡಿದ ಸಲಹೆ, ಸಂದೇಶಗಳನ್ನು ಒಳಗೊಂಡಿರುವ ಗೀತೆ ಬದುಕನ್ನು ಕಟ್ಟಿಕೊಡುತ್ತದೆ. ಹಾಗಾಗಿ ಏಕಾದಶಿ ದಿನದಿಂದು ಗೀತಾ ಜಂತಿಯನ್ನು ವೈಭವಪೂರ್ಣವಾಗಿ ಉತ್ಸವದಂತೆ ಆಚರಿಸಬೇಕು ಎಂದ ಅವರು ಮಕ್ಕಳಿಗೆ ಗೀತಾ ಪಠಣಕ್ಕೆ ಉತ್ತೇಜನ ನೀಡಲು ಕರೆ ನೀಡಿದರು.

ಕಾರ್ಯಕ್ರವನ್ನು ಬಾಬಾ ಮಾಹಾರಾಜ ಮಠದ ಗಜಾನನ ಮಾಹಾರಾಜರು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಭಾರತೀಯ ಪರಂಪರಯಲ್ಲಿ ಬರುವ ಎಲ್ಲಾ ಆಚರಣೆಗಳೆಲ್ಲವೂ ವೈಜ್ಞಾನಿಕ ತಳಹದಿಯಮೇಲಿದ್ದು, ಮೌಢ್ಯವನ್ನು ತೊರೆದು ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಕೊಂಡೋಯ್ಯುವ ಗುರುತರ ಜವಾಬ್ದಾರಿಯು ನಮ್ಮನಿಮ್ಮಲ್ಲೆರ ಆಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯಾಮೀನಿ ಜೋಶಿ, ಅನನ್ಯ ಕುಲಕರ್ಣಿ, ಅಪೂರ್ವ ಕುಲಕರ್ಣಿ, ಅಕ್ಷರ ಕುಲಕರ್ಣಿ, ಅಥರ್ವ ಕುಲಕರ್ಣಿ, ಮೀನಾಕ್ಷೀ ಕುಂಬಾರ, ಸಂಕರ್ಷಣ ಇವರುಗಳಿಂದ ಗೀತಾ ವಾಚನ ಮಾಡಿದರು.

ಶಿವನಗೌಡ ಚನ್ನೂರ, ನಾರಾಯಣರಾವ ಕುಲಕರ್ಣಿ, ಸಿದ್ದಣ್ಣ ಕುಂಬಾರ, ಭೀಮಣ್ಣ ಕುಂಬಾರ, ಶಿಕ್ಷರಾದ ನಾಗರಾಜ ಸಜ್ಜನ, ಶ್ರೀಶೈಲ ಪಾಸೋಡಿ, ತಿಪ್ಪಣ್ಣ ಟಿ, ಪರಮೇಶ್ವರಪ್ಪ, ಅಪ್ಪಾಜಿ, ಕಾಶೀರಾಯಗೌಡ ಮೇಟಿ ಸೇರಿದಂತೆ ಇತರರು ಇದ್ದರು.