
ವಿಜಯಪುರ:ಎ.8: ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರ ಗ್ರಾಮದಲ್ಲಿ ಗ್ರಾಮ ಪಂಚಾಯತ ಕಾರ್ಯಲಯದಿಂದ ಮತದಾನದ ವಿಶೇಷ ಜಾಗೃತಿ ಕಾರ್ಯಕ್ರಮ ಪ್ರಯುಕ್ತ ಜಾನಪದ ಗಾಯನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ಜುಬೇರ್ ಅಹಮ್ಮದ್ ಪಠಾಣ್ ಚಾಲನೆ ನೀಡಿ, ದೇಶದ ಪ್ರಜಾಪ್ರಬುತ್ವ ಹಬ್ಬವೆಂದು ಪರಿಗಣಿಸಲ್ಪಡುವ ಚುನಾವಣೆಯ ದಿನಾಂಕ ನಿಗದಿಯಾಗಿದ್ದು ತಾವು ಯಾವುದೇ ಆಸೆ, ಆಮೀಷಕ್ಕೆ ಒತ್ತಡಗಳಿಗೆ ಒಳಗಾಗದೆ ನಿರ್ಬಿತರಾಗಿ ಮತದಾನ ಮಾಡಬೇಕು ಎಂದು ನುಡಿದರು.
ಗೀಗಿ ಪದಗಳ ಕಲಾವಿದರು ಗೀಗೀ ಪದ ಹಾಡುವ ಮೂಲಕ ಮತದಾನದ ಹಕ್ಕು ಮತ್ತು ಮಹತ್ವದ ಕುರಿತು ಜಾಗೃತಿ ಮೂಡಿಸಿ ಸಾರ್ವಜನಿಕರ ಗಮನ ಸೆಳೆದರು. ಕಲಾವಿದೆ ಯಂಕವ್ವ ಮಾದರ ಲಕ್ಕವ್ವ ಮಾದರ ಹನಮಂತ ಮಾದರ ಪಿಡಿಓ ಅಧಿಕಾರಿ ರೇಣುಕಾ ರಸಾಳಕರ, ಐಇಸಿ ಸಂಯೋಜಕರಾದ ಶಾಂತಪ್ಪ ಇಂಡಿ, ಸುನಂದಾ ಮಾದರ ಸುಪಿಯಾ ಕೋಲಾರ ಮಾದೇವಿ ಹೂಗಾರ ಶ್ರೀದೇವಿ ಬಡಿಗೇರ ರೇಖಾ ನಾವಿ ಸರಿತಾ ಲಿಂಗದಳ್ಳಿ ಇತರರು ಹಾಜರಿದ್ದರು.