ಗಿಲ್ ದ್ವಿಶತಕ ಕಿವೀಸ್ ವಿರುದ್ಧ ಭಾರತಕ್ಕೆ 12 ರನ್ ರೋಚಕ ಗೆಲುವು: ಬ್ರೇಸ್ ವೆಲ್ ಶತಕ ವ್ಯರ್ಥ

ಹೈದರಾಬಾದ್, ಜ.19- ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಭಾರತ ನ್ಯೂಜಿಲೆಂಡ್ ವಿರುದ್ಧ 12 ರನ್ ಗಳಿಂದ ಜಯಗಳಿಸಿದೆ. ಈ ಜಯದೊಂದಿಗೆ ಭಾರತ 1-0 ಯಿಂದ ಮುನ್ನಡೆ ಸಾಧಿಸಿದೆ.
ಕಡೆಗಳಿಗೆಯವರೆಗೂ ಕಿವೀಸ್ ಬ್ರೇಸ್ ವೆಲ್ ಹೋರಾಟ ನಡೆಸಿ ಸಿಡಿಲಬ್ಬರದ ಶತಕ ಬಾರಿಸಿದ್ದು ವ್ಯರ್ಥವಾಯಿತು. ಹೀಗಾಗಿ ಭಾರತ 12 ರನ್ ಗಳ ರೋಚಕ ಜಯ ಸಾಧಿಸಿತು.
ಭಾರತದ ಪರ ಗಿಲ್ ತಮ್ಮ ಜೀವಮಾನದ ಶ್ರೇಷ್ಠ ಸಾಧನೆ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.
ಮೊದಲು ಬ್ಯಾಟ್ ಮಾಡಿದ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಗಿಲ್ 149 ಎಸೆತಗಳಲ್ಲಿ 19 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್ ನೆರವಿನಿಂದ 208 ರನ್ ಚಚ್ಚಿದರು. 48 ನೇ ಓವರ್ ನಲ್ಲಿ ಗಿಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಇದರ ಜತೆಗೆ ಏಕದಿನ ಕ್ರಿಕೆಟ್ ನಲ್ಲಿ 19 ಇನ್ನಿಂಗ್ಸ್‌ನಲ್ಲಿ ವೇಗವಾಗಿ 1000 ರನ್ ಬಾರಿಸಿದರು.


ಈ ಮೂಲಕ ಶುಭಮನ್ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಭಾರತದ ಐದನೇ ಬ್ಯಾಟರ್ ಎನಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಮೊತ್ತ ಮೊದಲ ದ್ವಿಶತಕ ಗಳಿಸಿದ ಕೀರ್ತಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಾಧನೆ ಮಾಡಿದ್ದರು. ಟೀಮ್ ಇಂಡಿಯಾದ ಈಗಿನ ನಾಯಕ ರೋಹಿತ್ ಶರ್ಮಾ, ಏಕದಿನದಲ್ಲಿ ಅತಿ ಹೆಚ್ಚು ಅಂದರೆ ಮೂರು ಬಾರಿ ದ್ವಿಶತಕ ಗಳಿಸಿದ್ದಾರೆ.

ರೋಹಿತ್ 34, ಸೂರ್ಯಕುಮಾರ್ 31, ಪಾಂಡ್ಯ 28ರನ್ ಗಳಿಸಿದರು. ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಆಡಲು ವಿಫಲರಾದರು.

ಬೃಹತ್ ಮೊತ್ತದ ಸವಾಲಿನ ಬೆನ್ನಹತ್ತಿದ ನ್ಯೂಜಿಲೆಂಡ್ ಕಡೆಗಳಿಗೆಯವರೆಗೂ ನಡೆಸಿದ ಹೋರಾಟ ವಿಫಲವಾಯಿತು. 49.2 ಓವರ್ ಗಳಲ್ಲಿ 337 ರನ್ ಗಳಿ ಗೆ ಸರ್ವ ಪತನ ಕಂಡಿತು.

ಒಂದು ಹಂತದಲ್ಲಿ 131 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ಸೋಲಿನ ದವಡೆಗೆ ಸಿಲುಕಿತ್ರು. ಬ್ರಾಸ್ ವೆಲ್ ಮತ್ತು ಸಾನ್ ಟ್ನರ್ ಜೊತೆಗೂಡಿ ಭಾರತದ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದರು.

ಬ್ರೇಸ್ ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 78 ಎಸೆತಗಳಲ್ಲಿ 10 ಬೌಂಡರಿ ಹಾಗೂ 12 ಸಿಕ್ಸರ್ ಬಾರಿಸಿ 140 ರನ್ ಗಳಿಸಿದರು. ಸಾನ್ ಟ್ನರ್ 57 ರನ್ ಗಳಿಸಿದರು. ಫಿನ್ ಅಲೆನ್ 40 ಹಾಗೂ ಟಾಂ ಲಾಥಂ 24 ರನ್ ಗಳಿಸಿದರು.

ಭಾರತದ ಪರ ಸಿರಾಜ್ 4, ಕುಲ್ದೀಪ್ ಹಾಗೂ ಶಾರ್ದೂಲ್ ತಲಾ 2 ವಿಕೆಟ್ ಪಡೆದರೆ, ಶಮಿ ಮತ್ತು ಪಾಂಡ್ಯ ತಲಾ ಒಂದು ವಿಕೆಟ್ ಗಳಿಸಿದರು.