ಗಿಲ್ಲೆಸೂಗೂರು : ಯೋಗತಾನ್ ಕಾರ್ಯಕ್ರಮ

ರಾಯಚೂಉರ.ಜು.೧೯- ನಗರದ ಹೊರವಲಯದಲ್ಲಿ ಬರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ( ಗಿಲ್ಲೆಸೂಗೂರು) ರಾಯಚೂರುನಲ್ಲಿ ಇಂದು ಯೋಗತಾನ್ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ರುದ್ರಮುನಿ ಬಾಲರಾಜ್ ಮಾತನಾಡುತ್ತಾ ರಾಯಚೂರು ಜಿಲ್ಲೆಯ ಯೋಗದಲ್ಲಿ ಉತ್ತಮ ಗುರಿ ಮುಟ್ಟಬೇಕು ಯೋಗದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಗುಟ್ಟು ಅಡಗಿದೆ ಹಾಗೂ ಹೊಸ ಚೈತನ್ಯ ತುಂಬಲು ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ರಮ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಹಲವಾರು ಮಾರಣಾಂತಿಕರೋಗಗಳು ಹೆಚ್ಚಾಗುತ್ತಿವೆ. ಇಂಥ ಕಾಯಿಲೆಗಳು ಹರಡುವ ಮುನ್ನ ತಡೆಯಲು ಸರ್ಕಾರವು ಯೋಗತಾನ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದರ ಸದು ಉಪಯೋಗ ಪಡೆದುಕೊಳ್ಳಬೇಕೆಂದರು ಇದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಹತ್ವವಾಗಿರುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜೇಶ್ವರಿ ಪ್ರಾಂಶುಪಾಲರು ಅಧ್ಯಕ್ಷತೆಯನ್ನು ವಹಿಸಿಕೊಂಡರು ಡಾ.ತಿಮ್ಮಪ್ಪ ವಡ್ಡೆಪಲ್ಲಿ, ಯೋಗ ಅಭ್ಯಾಸ ಮಾಡಿಸಿ ಯೋಗಾಸನ ಹಾಗೂ ಪ್ರಾಣಾಯಾಮ ಕುರಿತು ಉಪನ್ಯಾಸ ನೀಡಿದರು ಮತ್ತು ಮುಖ್ಯ ಅತಿಥಿಗಳಾದ ಸಂತೋಷ ಕ್ರೀಡಾ ಇಲಾಖೆ ಹಾಗೂ ಶಾಲೆದೈಹಿಕ ಶಿಕ್ಷಣ ಶಿಕ್ಷಕಿಯಾದ ವೀಣಾ ಎನ್.ಜೇ ,ನಿಲಯ ಪಾಲಕರಾದ ರವಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.