`ಗಿರ್ಕಿ’ಗೆ ಉತ್ತಮ ಪ್ರತಿಕ್ರಿಯೆ

.ಕಿರುತೆರೆ,ಹಿರಿತೆರೆಯಲ್ಲಿ ಪಾತ್ರದ ಮೂಲಕ ನಕ್ಕುನಗಿಸುತ್ತಿರುವ  ತರಂಗ ವಿಶ್ವ ನಿರ್ಮಾಣ ವೀರೇಶ್ ಪಿ.ಎಂ ನಿರ್ದೇಶಿಸಿರುವ “ಗಿರ್ಕಿ” ಚಿತ್ರಕ್ಕೆ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ವೇಳೆ ಸಂತಸ ಹಂಚಿಕೊಂಡ ವಿಶ್ವ, ಚಿತ್ರಕ್ಕೆ ರಾಜ್ಯಾದ್ಯಂತ  ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರದ ಹಿಂದಿ ರೈಟ್ಸ್ ಕೂಡ  ಮಾರಾಟವಾಗುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ  ಮತ್ತೊಂದು ಚಿತ್ರ ಆರಂಭಿಸಲಿದ್ದೇನೆ ಎಂದರು.

ನಿರ್ದೇಶಕ ವೀರೇಶ್ ಪಿ.ಎಂ ಸಹ ನಿರ್ದೇಶಕನಾಗಿ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದ್ದ ವೇಳೆ  ಪ್ರಶಂಸೆಯ ಮಾತು  ಕೇಳಿ  ನಿರ್ದೇಶಕನಾಗುವ ಅಸೆ ಮೂಡಿತ್ತು.ಚಿತ್ರಕ್ಕೆ ಉತ್ತಮ ಪ್ರಶಂಸೆ ಸಿಗುತ್ತಿದೆ ಎಂದರು.

ನಟಿ ದಿವ್ಯ ಉರುಡಗ, ಯಶಸ್ಸನ್ನು ಸಂಭ್ರಿಮಿಸುವುದು ಒಬ್ಬೊಬ್ಬರು ಬೇರೆ ಬೇರೆ ರೀತಿ ಎಂದು ಖುಷಿ‌ ಹಂಚಿಕೊಂಡರೆ ಮತ್ತೊಬ್ಬ ನಟಿ ರಾಶಿ ಮಹದೇವ್ ಪರಿಮಳ ಪಾತ್ರದ ಮೂಲಕ  ಗುರುತಿಸುತ್ತಿರುವುದು ಸಂತೋಷವಾಗಿದೆ ಎಂದರು. ನಟ ವಿಲೋಕ್ ರಾಜ್ ,ಸಂಗೀತ ನಿರ್ದೇಶಕ ವೀರಸಮರ್ಥ್, ವಿತರಕ ರಾಜು ಮಾತನಾಡಿದರು.