ಗಿರಿ ಪೌಂಡೇಶನ್‍ದಿಂದ ಕಡುಬಡವರಿಗೆ ಆಹಾರ ಕಿಟ್ ವಿತರಣೆ


ಧಾರವಾಡ ಮೇ-17-ದೊಡ್ಡ ದೊಡ್ಡ ಕಂಪನಿಗಳು, ವ್ಯಾಪಾರಸ್ಥ ಸಂಸ್ಥೆಗಳು ತಮ್ಮ ವ್ಯಾಪಾರದ ಲಾಭದಲ್ಲಿ ಇಂತಿಷ್ಟು ಸಾರ್ವಜನಿಕ ಕಾರ್ಯಕ್ಕೆ ವಿನಿಯೋಗಿಸಬೇಕು ಎಂದಿದೆ. ಇಂಥ ಸಂದರ್ಭದಲ್ಲಿ ಎಲ್ಲಬೈಹತ್ ಉದ್ಯಮಗಳು ಕೊರೊನಾದಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರ ಜೀವನ ನಿರ್ವಹಣೆಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಗಿರಿ ಫೌಂಡೇಶನ ನಿರ್ದೇಶಕ ಪ್ರದೀಪ ಮೇಲ್ಗಡೆ ನುಡಿದರು. ಅವರು ಗುಬ್ಬಚ್ಚಿ ಗೂಡು ಶಾಲೆಯಲ್ಲಿ ಆಹಾರದ ಅಗತ್ಯ ವಸ್ತುಗಳ ಕಿಟ್‍ಗಳನ್ನು ವಿತಸಿರಿಸಿ ಮಾತನಾಡಿದರು.
ಈ ನಿಟ್ಟಿನಲ್ಲಿ ಧಾರವಾಡ ಮಲಬಾರ ಗೋಲ್ಡ್ ಆಂಡ್ ಡೈಮನ್ಸ್ ವ್ಯಾಪಾರ ಸಂಸ್ಥೆಯು ತನ್ನ ಸಾಮಾಜಿಕ ಜಬಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದೆ. ಕಳೆದ ಅತೀವೃಷ್ಟಿ ಕಾಲದಲ್ಲಿ, ಹಾಗೆಯೇ ಮೊದಲ ಹಂತದ ಕೊರೋನ ಸಂದರ್ಭದಲ್ಲಿ ನಿರ್ಗತಿಕರಿಗೆ, ಕಡುಬಡವರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‍ನ್ನು ನೀಡುತ್ತಾ ಬಂದಿದೆ. ಈಬಾರಿಯೂ ಗಿರಿ ಫೌಂಡೇಶನ್ ಮೂಲಕ ಚಿಲಿಪಿಲಿ ಸಂಸ್ಥೆಯ ನೆರವಿನಿಂದ ನೂರಾರು ಕುಟುಂಬಗಳಿಗೆ ಅಗತ್ಯ ಆಹಾರಕ್ಕೆ ಪೂರಕವಾದ ಸಾಮಗ್ರಿಗಳ ಕಿಟ್‍ನ್ನು ನೀಡಲು ಮುಂದಾಗಿದ್ದು ಅಭಿನಂದನೀಯ ಎಂದರು.
ಚಿಲಿಪಿಲಿ ಸಂಸ್ಥೆಯ ಶಂಕರ ಹಲಗತ್ತಿ ಮಾತನಾಡಿ, ಕೊರೋನಾದ ಸಂಕಷ್ಟದ ಈ ದಿನಗಳಲ್ಲಿ ಶ್ರಮಿಕ ವರ್ಗದ ಜನತೆಗೆ ಜೀವನ ಸಾಗಿಸುವುದು ಒಂದು ಸವಾಲಾಗಿದೆ. ಕೂಲಿಕಾರರು, ಕೃಷಿ ಕೂಲಿಕಾರರು, ಕಟ್ಟಡ ಕಾರ್ಮಿಕರು, ಕಲಾವಿದರು ಹೀಗೆ ದುಡಿಯುವ ವರ್ಗದ ಕಷ್ಟದ ದಿನಗಳಿಗೆ ಉಳ್ಳವರು ಸಹಾಯ ಹಸ್ತವನ್ನು ಚಾಚಬೇಕು. ನಮ್ಮೆದುರಿಗೆ ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದವನಿರುವಾಗ ನಾವು ಮೃಷ್ಠಾನ ಭೋಜನ ಮಾಡುತ್ತೇವೆ ಎಂದರೆ ಮನುಷ್ಯತ್ವ ಕಳೆದುಕೊಂಡಿದ್ದೇವೆ ಎಂದರ್ಥ. ಕನ್ನಡದ ನೆಲ ಶರಣರ ನೆಲ, ಹಂಚಿಕೊಂಡು ತಿನ್ನುವ ದಾಸೋಹ ಪರಂಪರೆಯದಾಗಿದೆ. ಯಾರೊಬ್ಬರೂ ಹಸಿವಿನಿಂದ ಬಳಲುವಂತಾಗಬಾರದು, ಧಾರವಾಡದಲ್ಲಿ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ ವ್ಯಾಪರಸ್ತರು ಉಳಿದ ವ್ಯಾಪಾರಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಈ ನೆಲದ ಉದ್ದಿಮೆದಾರರು, ವ್ಯಾಪಾರಸ್ತರು, ವಿಶೇಷವಾಗಿ ತಿಂಗಳಿಗೆ ಎರಡು ಲಕ್ಷ, ಮೂರು ಲಕ್ಷ ವೇತನ ಪಡೆಯುತ್ತಿರುವ ನೌಕರಸ್ಥರರು ಉದಾರ ಮನಸು ಮಾಡಿ ಸಂಕಷ್ಟದಲ್ಲಿರುವ ಜನತೆಯ ಸಹಾಯಕ್ಕೆ ಮುಂದಾಗಬೇಕು ಎಂದರು. ಗುಬ್ಬಚ್ಚಿ ಗೂಡು ಶಾಲೆಯಲ್ಲಿಯ ಕಡುಬಡವ ಮಕ್ಕಳ ಪಾಲಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು, ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ ಕಂಪನಿಯ ಮಾರುಕಟ್ಟೆ ವ್ಯವಸ್ಥಾಪಕರಾರದ ಇರ್ಫಾನ್ ಬಳ್ಳಾರಿ ಹಾಗೂ ಗುಬ್ಬಚ್ಚಿ ಗೂಡು ಶಾಲೆಯ ಆಡಳಿತಾಧಿಕಾರಿ ಉಪಸ್ಥಿತರಿದ್ದರು,