ಗಿರಿ ಜಿಲ್ಲೆ ಕಲಾವಿದರಿಗೆ ವೇದಿಕೆ, ನೊಂದವರಿಗೆ ಸಾಂತ್ವನ ನೀಡುವ ಸಂಘಟನೆ ಕರವೇ ;ಹನುಮ

ಯಾದಗಿರಿ: ನ.28:ಗಿರಿ ಜಿಲ್ಲೆಯಲ್ಲಿ ಕಲಾವಿದರಿಗೆ ವೇದಿಕೆ ಒದಗಿಸಿಕೊಟ್ಟ ನಮ್ಮ ಕರುನಾಡು ರಕ್ಷಣಾ ವೇದಿಕೆ ನೊಂದವರಿಗೆ ಸಾಂತ್ವನ ನೀಡುವ ಸಂಘಟನೆಯಾಗಿದ್ದು ಇವರ ಮಾದರಿ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಝೀ ಟಿವಿ ಸರಿಗಮಪ ಕೋಗಿಲೆ ಖ್ಯಾತಿಯ ಹಾವೇರಿ ಜಿಲ್ಲೆಯ ಕಟ್ಟಿಹಳ್ಳಿ ತಾಂಡಾ ಹಣಮಂತ ಲಮಾಣಿ ಹೇಳಿದರು.

ನಗರದ ವಿದ್ಯಾಮಂಗಳ ಕಾರ್ಯಾಲಯ ದಲ್ಲಿ ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಸಮಾರಂಭ ಹಾಗೂ ಜಿಲ್ಲೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಇಂತಹ ಸಂಘಟನೆಗಳು ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ಕಲಾವಿದರಿಗೆ ಅವಕಾಶ ಮಾಡಿಕೊಟ್ಟಲ್ಲಿ ಈ ಭಾಗದ ಕಲಾ ಗೌರವ ಶ್ರೀಮಂತಿಕೆ ಎಲ್ಲ ಕಡೆ ಪರಿಚಯವಾಗುತ್ತದೆ ಎಂದು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ ಸಂಘಟನೆಗಳು ಸಮಾಜ ಸೇವೆ ಮಾಡುತ್ತಾ ಬಂದಿದ್ದು ಕೋವಿಡ್ ಸಂದರ್ಭದಲ್ಲಿಯೂ ಉತ್ತಮ ಸೇವೆ ಮಾಡಿ ಜನರಿಗೆ ನೆರವಾಗಿವೆ. ಅದೇ ರೀತಿ ಸಾಂಸ್ಕøತಿಕ ಕಾರ್ಯಕ್ರಮದ ಸಂದರ್ಭದಲ್ಲಿಯೂ ಹಿಂದೆ ಬೀಳದೇ ಅತ್ಯುತ್ತಮವಾಗಿ ಕಾರ್ಯ ಮಾಡುತ್ತಿದ್ದು ಗಿರಿನಗರಕ್ಕೆ ಹೆಸರು ತರುವ ಕೆಲಸ ಮಾಡುತ್ತಿದ್ದು, ಇವರ ಪೈಕಿ ನಮ್ಮ ಕರುನಾಡು ರಕ್ಷಣಾ ವೇದಿಕೆ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.

ನಮ್ಮ ಕರುನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ಶಂಕರೇಗೌಡ ಮಾತನಾಡಿ ಕನ್ನಡ ಉಳಿಸಿ ಬೆಳೆಸಲು ಎಲ್ಲರೂ ಪಣ ತೊಡಬೇಕು, ಹಿಂದುಳಿದ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಉಳಿಸಿಬೆಳೆಸುವ ನಿಟ್ಟಿನಲ್ಲಿ ನಮ್ಮ ಕರುನಾಡು ರಕ್ಷಣಾ ವೇದಿಕೆ ಸದಾ ಮುಂಚೂಣಿಯಲ್ಲಿದ್ದು ಇದೇ ಮಾದರಿಯಲ್ಲಿ ಯಾದಗಿರಿಯಲ್ಲಿ ಸಂಘಟನೆ ಅನ್ಯಾಯದ ವಿರುದ್ಧ ಹೋರಾಟ ಸಂಘಟಿಸುತ್ತಾ ನವೆಂಬರ್ ತಿಂಗಳಲ್ಲಿ ಕಲೆ, ಸಂಸ್ಕøತಿಯನ್ನು ಪಸರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಇದನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ ಎಂದು ನುಡಿದರು.

ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಸ್ವಾಮೀಜಿ ಮಾತನಾಡಿ ಕನ್ನಡ ಉಳಿಯಬೇಕಾದರೆ ಪ್ರತಿಯೊಬ್ಬರು ನಾಡು ನುಡಿ ನೆಲ ಜಲ ರಕ್ಷಣೆಗೆ ಮುಂದಾಗಬೇಕು ಹಾಗಾದಲ್ಲಿ ಮಾತ್ರ ಉಳಿಸಲು ಸಾಧ್ಯ ಇಲ್ಲವಾದರೆ ಈ ತಾಯಿ ಭಾಷೆ ಉಳಿವಿಗೆ ಕಷ್ಟವಾಗುತ್ತದೆ ಎಂದು ಹೇಳಿದರು.

ರವಿ ಮುದ್ನಾಳ ಅವರ ನೇತೃತ್ವದಲ್ಲಿ ನಮ್ಮ ಕರುನಾಡು ರಕ್ಷಣಾ ವೇದಿಕೆ ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದಲ್ಲದೇ ಮಠಾಧೀಶರನ್ನು ಎಲ್ಲ ಕಾರ್ಯಕ್ರಮಗಳಲ್ಲಿ ಆಹ್ವಾನಿಸುವ ಮೂಲಕ ಅತ್ಯಂತ ಸಂಸ್ಕøತಿ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

ಯುಡಾ ಅದ್ಯಕ್ಷ ಬಸವರಾಜ ಚಂಡ್ರಕಿ ಮಾತನಾಡಿ ಕನ್ನಡ ಪರ ಸಂಘಟನೆಗಳ ಪೈಕಿ ನಮ್ಮ ಕರುನಾಡು ರಕ್ಷಣಾ ವೇದಿಕೆ ವಿಭಿನ್ನವಾಗಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಅವರು ನುಡಿದರು.

ಅಧ್ಯಕ್ಷತೆಯನ್ನು ನಮ್ಮ ಕರುನಾಡು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ಕೆ. ಮುದ್ನಾಳ ವಹಿಸಿದ್ದರು. ವೇದಿಕೆ ಮೇಲೆ ಶಿವ ಪಾರ್ವತಿ ಮಠದ ಭೀಮಾ ಸ್ವಾಮಿ, ಡಾ|| ವಿನಿತಾ, ನಮ್ಮ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ರಾಜ ಸಿಕೆ, ರಾಜ್ಯ ಉಪಾಧ್ಯಕ್ಷ ಗಂಗಾಧರ ಕುಂಬಾರ, ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಅನಿತಾ ಸುರೇಶ ರಾಠೋಡ, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಪ್ರಭಾವತಿ ಕಲಾಲ್, ನಾಮನಿರ್ದೇಶನ ಸದಸ್ಯೆ ಸುನಿತಾ ಚವ್ಹಾಣ, ಪರಶುರಾಮ ಚವ್ಹಾಣ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಗೋವಿಂದ ಚವ್ಹಾಣ, ಶಂಕರ ಚವ್ಹಾಣ, ನಿರಂಜನ ಎಸ್.ಕೆ., ಮಶೇಪ್ಪ ನಾಯಕ, ಆಕಾಶ ರಾಠೋಡ, ನಾಗು ರಾಠೋಡ ಶಹಾಪೂರ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಸಾಧಕರಾದ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸಿ.ಎಂ. ಪಟ್ಟೇದಾರ, ಮಹಿಳಾ ಸಾಹಿತಿ ಭಾಗ್ಯವಂತಿ ಕೆಂಭಾವಿ, ಕೋವಿಡ್ ವಾರಿಯರ್ ಪ್ರಿಯಾಂಕ ಸಜ್ಜನ್, ಶಾಸಕ ಮದ್ನಾಳರ ಆಪ್ತ ಕಾರ್ಯದರ್ಶಿ ಸುಧೀರ್ ಪಾಟೀಲ್, ವಿಠಲ್ ಭಾಸ್ಕರ್ ವರುಣ, ಸಂಗೀತಗಾರ ಗೋಗಿ, ವಸತಿ ನಿಲಯ ಮೇಲ್ವಿಚಾರಕ ದೇವೇಂದ್ರಪ್ಪ ರುದ್ರವಾರ, ಶಿಕ್ಷಕ ದೇವಿಂದ್ರಪ್ಪ ನಾಟೇಕರ್, ವಿದ್ಯಾರ್ಥಿ ಮುಖಂಡ ಸತೀಶ ದುಪ್ಪಲ್ಲಿ ಮಾಧ್ಯಮ ಕ್ಷೇತ್ರದ ಅಮರೇಶ ಬಿಳ್ಹಾg (ವಿಜಯ ಕರ್ನಾಟಕ)À, ರಾಜು ನಲ್ಲಿಕರ (ಪ್ರಜಾವಾಣಿ), ಸೈಯದ್ ಮನ್ಸೂರ್ (ಯಾದಗಿರಿ ಟೈಮ್ಸ್) ಅವರಿಗೆ ಜಿಲ್ಲಾ ಸಾಧಕರೆಂದು ಪರಿಗಣಿಸಿ ಸನ್ಮಾನಿಸಲಾಯಿತು.

ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿದರು. ನಿರಂಜನ ವಂದಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ವಾಹಿನಿಯ ಹಾಡುಗಾರರಾದ ಹಣಮಂತ ಲಮಾಣಿ, ಭಕ್ತ ಕುಂಬಾರ, ಕವಿತಾ ಬಿಜಾಸ್ಪೂರ, ಸವಿತಾ ಧಾರವಾಡ, ಗೀತಾ ಸೇರಿದಂತೆ ಇನ್ನಿತರರು ಸಂಗೀತ ನೀಡಿದರು.