ಗಿರಿಮಲ್ಲಪ್ಪನವರ ಕುಟುಂಬಕ್ಕೆ
ಸಚಿವ ಶ್ರೀರಾಮುಲು ಸಾಂತ್ವನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,31- ಮಹರ್ಷಿ ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದ   ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ  ವಿ.ಎನ್. ಗಿರಿ ಮಲ್ಲಪ್ಪ ಅವರ ತಾಲೂಕಿನ ಸೋಮ ಸಮುದ್ರ ಗ್ರಾಮದಲ್ಲಿನ ನಿವಾಸಕ್ಕೆ ಇಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು  ಭೇಟಿ ನೀಡಿ ಗಿರಿಮಲ್ಲಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ  ಕುಟುಂಬದ ಸದಸ್ಯರಿಗೆ ಸಾಂತ್ವನ‌ ಹೇಳಿ ಗಿರಿಮಲ್ಲಪ್ಪ ಅವರ ಸೇವೆಯನ್ನು ಸ್ಮರಿಸಿದರು.
ಮಾಜಿ ಶಾಸಕ  ಟಿ.ಹೆಚ್.ಸುರೇಶ್ ಬಾಬು, ಸೋಮಸಮುದ್ರ ಗ್ರಾಮದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.