ಗಿರಿಜಮ್ಮ ಮುಖ್ಯೋಪದ್ಯಾಯರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಅರಕೇರಾ.ಸೆ.೦೪- ಶಿಕ್ಷಕರು ಆಧುನಿಕ ಭಾರತದ ಶಿಲ್ಪಗಳು ಎಂಬಾ ಮಾತು ಅಕ್ಷರಶ: ಸತ್ಯ ಶಿಕ್ಷಕರಿಂದ ಕಲಿತು ಪ್ರತಿಯೊಂದು ಕ್ಷೇತ್ರದಲ್ಲಿ ಶಿಕ್ಷಕ ವೃತ್ತಿ ಪ್ರಸಿದ್ದಿಯಾಗಿದೆ. ಪ್ರತಿಯೊಬ್ಬರ ಹಿಂದೆಯೂ ಶಿಕ್ಷಕರು ಕಲಿಸಿದ ಸೇವೆ ಅವಿಸ್ಮರಣಿಯಾವಾದ್ದು. ಶ್ರಮಶಕ್ತಿ ದುಡಿಮೆ ಮೂಲಕ ಅವಿರತ ಸಾಧನೆಮಾಡಿದ ಶಿಕ್ಷಕರ ಯೋಶೊಗಾದೆಯನ್ನು ಹೇಳುವುದಕ್ಕಾಗಿ ಈ ಪೀಠಿಕೆ
ಇವರೇ ಗಿರಿಜಮ್ಮ ತಂದೆ: ಶಿವನಗೌಡ ಜನ್ಮದಿನಾಂಕ: ೫-೦೬ ೧೯೮೩ ಸೇವೆಗೆ ಸೇರಿದ ದಿನಾಂಕ: ೧೦-೨-೨೦೦೭ ಸೇವೆಸಲ್ಲಿಸುವ ಶಾಲೆಯ ಹೆಸರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಿಂಗನದೊಡ್ಡಿ (ಅರಕೇರಾ ವಲಯಾ) ತಾ.ದೇವದುರ್ಗ ಜಿ.ರಾಯಚೂರು ಶಾಲೆಯಲ್ಲಿ ಮುಖ್ಯೋಪದ್ಯಾಯರಾಗಿಸದರಿಯವರು ಸೇವೆ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶೇಷತೆಗಳು: ಸತತ ೧೫ ವರ್ಷಗಳಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದು ಮಕ್ಕಳಿಗೆ ವಿವಿಧ ಪರೀಕ್ಷೆಯಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಾರೆ ಮೂರಾರ್ಜಿದೇಸಾಯಿ ವಸತಿ ಶಾಲೆ ಗಳಿಗೆ ಆಯ್ಕೆಯಾಗಿದ್ದಾರೆ. ಹವ್ಯಾಸಗಳು: ಶಾಲಾ ಮಕ್ಕಳಿಗೆ ಸಂಸ್ಕೃತಿಕ ಕಾರ್ಯುಕ್ರಮದಲ್ಲಿ ಭಾಗವಹಿಸಲು ಸ್ಪೂರ್ತಿ ನೀಡುತ್ತಾಬಂದಿದ್ದಾರೆ. ಶಾಲಾ ಸುಧಾರಣಾ ಸಮಿತಿಯವರ ಸಹಕಾರದೊಂದಿಗೆ ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳಿಗೆ ಸಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಿ ಮಕ್ಕಳಿಗೆ ಪ್ರೋತ್ಸಾಹ ನೀಡುವದು,
ಪ್ರಶಸ್ತಿಗೆ ಬಾಜನರಾದ ಗಿರಿಜಮ್ಮ ಗಂಡ ದಿ. ಪ್ರಕಾಶ ಮುಖ್ಯೋಪದ್ಯಾಯರ ಅನಿಸಿಕೆಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು ಸಂತೋಷವಾಗಿದೆ ಪ್ರಶಸ್ತಿ ಬಂದಹಾಗೆ ಜವಬ್ದಾರಿಗಳು ಹೆಚ್ಚಾಗುತಿವೆ. ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕ ವೃತಿ ಬಹಳ ಸಂತೋಷವನ್ನುವುಂಟು ಮಾಡುತ್ತದೆ ಯಾಕೆಂದರೆ ಗುರುದೇವೋ ಭವ ಎಂದು ಹೇಳುತ್ತಾರೆ. ಗುರುವಿನ ಸ್ಥಾನ ದೊಡ್ಡದು ಪ್ರಶಸ್ತಿಗಿಂತ ಸಾಧನೆಗಳು ಮುಖ್ಯ ಶಿಕ್ಷಕ ಹೆಚ್ಚು ಹೆಚ್ಚು ಸಾಧನೆಗಳು ಮಾಡಿದಾಗ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾದ್ಯವಾಗುತ್ತದೆ. ಶಿಕ್ಷಕರು ನುರಿತ ಶಿಕ್ಷಕರುಹಾಗಬೇಕು.ಯಾವಾಗಲೂ ಮಕ್ಕಳ ಯಶ್ವಸಿಯನ್ನು ಬಯಸುತ್ತಾ ನಿರಂತರವಾಗಿ ದುಡಿಯಬೇಕು ಮಕ್ಕಳ ಯಶ್ವಸಿಗಳೆ ಪ್ರಶಸ್ತಿಗಳು ಇದ್ದಹಾಗೆ ಎಂದು ನುಡಿದರು.
ಸೆ ೫-೯-೨೦೨೨ ರಂದು ಜಿಲ್ಲಾ ಪಂಚಾಯತ ರಾಯಚೂರು ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪೌಢ ಶಾಲಾ ಶಿಕ್ಷಕರ ಸಂಘ ರಾಯಚೂರು ಇವರ ಸಂಯುಕ್ತಾ ಶ್ರಯದಲ್ಲಿ ನಡೆಯುವ ಜಿಲ್ಲಾ,ಮಟ್ಟ ಮತ್ತು ತಾಲ್ಲೂಕ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನಸಮಾರಂಭ ಕಾರ್ಯಕ್ರಮ ಸ್ಥಳ ರಾಯಚೂರು ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜರಗುವ. ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸುತ್ತಿರುವ ಗಿರಿಜಮ್ಮ ಪ್ರಕಾಶ.