ಗಿರಿಜನ ಮಹಿಳೆ ಮೇಲೆ ದೌರ್ಜನ್ಯ

ಹುಣಸೂರು,ಏ.09-ಯುವ ಗಿರಿಜನರೈತ ಮಹಿಳೆ ಯೊರ್ವಳು ಕಷ್ಟಪಟ್ಟು ಬೆಳೆದ ಬೆಳೆಗಳನ್ನು, ಸರ್ವಣಿ ಯರಗುಂಪೊಂದು ಏಕಾಏಕಿ ದಾಳಿ ನಡೆಸಿ ನಾಶ ಮಾಡಿರುವುದರಿಂದರೈತ ಮಹಿಳೆಗೆ ಸುಮಾರು 10ಲಕ್ಷಕ್ಕೂ ಅಧಿಕ ಮೊತ್ತ ನಷ್ಟವಾಗಿರುವಜೊತೆಗೆಆಕೆಯ ಕುಟುಂಬಕ್ಕೆಜೀವ ಭಯಕಾಡುತ್ತಿರುವ ಬಗ್ಗೆ ಮಹಿಳೆ ಕಣ್ಣಿರಾಕಿದ್ದಾಳೆ.
ತಾಲ್ಲೂಕಿನ ಕಾಡುವಡ್ಡರಗುಡಿ ಗ್ರಾಮದ ಸರ್ವೆ ನಂ:33ರಲ್ಲಿ ಸರ್ಕಾರ 1959ರಲ್ಲಿ ಸುಮಾರು 114 ಎಕರೆ ಜಮೀನನು ಜೇನುಕುರುಬ ಗಿರಿಜನ ಕುಟುಂಬ ಗಳಿಗೆ ವ್ಯವಸಾಯಕ್ಕೆಂದು ಮಂಜೂರು ಮಾಡಿತಾ ದರೂ ಸಾಗುವಳಿ ನೀಡುವಲ್ಲಿ ವಿಫಲವಾಗಿತ್ತು. ಅಂದಿನಿಂದಲೂ ಜೇನು ಕುರುಬ ಕುಟುಂಬಗಳೆ ತಲಾತಲಾಂತರದಿಂದ ಆ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತ ಬಂದಿದ್ದು, ಅದರಂತೆ ಗ್ರಾಮದ ಗಿರಿಜನ ಮಹಿಳೆ ಎಂ.ಎಸ್.ಡ್ಬ್ಯೂ ಪಧವಿದರೆ ಶ್ವೇತಾತಮ್ಮ ಪಾಲಿನ ಜಮೀನಿನಲ್ಲಿ ಈ ಬಾರಿ ಬಾಳೆ, ಮೇಣಸಿನಕಾಯಿ ಬೇಳದಿದ್ದು, ಮೊನ್ನೆ ಅದರ ಕಳೆ ಕೀಳಿಸುವ ಕೆಲಸ ಮಾಡುವ ಸಂದರ್ಭ ಏಕಾಏಕಿ 150ಕ್ಕೂ ಹೆಚ್ಚು ಸರ್ವಣಿಯಕುಟುಂಬ ಸದಸ್ಯರು ಮಹಿಳೆಯರು ಸೇರಿದಂತೆ ಟ್ರಾಕ್ಟರ್‍ಗಳೊಂದಿಗೆ ಶ್ವೇತಾ ಜಮೀನಿಗೆ ನುಗ್ಗಿ ಅವರನ್ನು ಎಳೆದಾಡಿ ಕೆಳಗೆ ಬಿಳಿಸಿ, ಸಂಪೂರ್ಣ ಬಾಳೆ ಹಾಗೂ ಮೇಣಸು ಬೆಳೆ ನಾಶಪಡಿಸಿರುವ ಜೊತೆಗೆಎರಡು ಬೋರ್ ಹಾಗೂ ಅದರ ಪೈಪ್‍ಲೈನ್‍ಗಳನ್ನು ಮತ್ತು ಶೇಡ್ ನಿರ್ಮಿಸಲು ಶೇಖರಿಸಿದ ಪದಾರ್ಥಗಳನ್ನು ನಾಶಪಡಿಸಿ ಧಾಂದಲೆ ನಡೆಸಿದ್ದಾರೆ.
ಅನಾಹುತಕ್ಕೆ ಸರ್ಕಾರ ಪರೋಕ್ಷಕಾರಣ: ತಾಲ್ಲೂಕಿನ ಕಾಡುವಡ್ಡರಗುಡಿ ಗ್ರಾಮದ ಸರ್ವೆ ನಂ:33 ರಲ್ಲಿನ 114 ಎಕರೆಯ ಇದೆ ಜಮೀನುಗಳನ್ನು ತಾಲ್ಲೂಕು ಕಂದಾಯ ಅಧಿಕಾರಿಗಳ ಎಡವಟ್ಟಿನಿಂದ ಸರ್ಕಾರ ಅವೈಜಾÐನಿಕವಾಗಿ ಬೇರೆಯವರಿಗೆಪುನ: ಮಂಜೂರು ಮಾಡಿದ್ದು, ಈ ವಿಚಾರ ನ್ಯಾಯಲಯದ ಮೇಟ್ಟಿಲು ಹತ್ತಿಇದುಗಿರಿಜನರಿಗೆ ಸೇರಿದ್ದುಎಂದು ನ್ಯಾಯಲಯ ಆದೇಶಿಸಿದರು,ಗಿರಿಜನರ ಮೇಲೆ ಸರ್ವಣಿ ಯರದಾಂದಲೆ ಇನ್ನೂ ತಪ್ಪಿಲ. ಈಗ ಎರಡು ದಿನದ ಹಿಂದೆಕೂಡ ಸರ್ವಣಿಯರ ಗುಂಪು ಇದೇ ಶ್ವೇತಾರ ಸಂಬಂಧಿಕರ ಜಮೀನಿನಲ್ಲೂ ದಾಳಿ ಮಾಡಿ ಕೃಷಿ ಕಾರ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪೋಲಿಸರಿಗೆದೂರು ನೀಡಿದರು, ಪೋಲಿಸರು ಯಾವುದೇ ಸೂಕ್ತ ಕ್ರಮ ವಹಿಸಿಲ್ಲ ಎಂದು ಶ್ವೇತಾರ ತಾಯಿ ಮಹದೇವಮ್ಮ ಆರೋಪಿಸಿದ್ದಾರೆ.
ಗಿರಿಜನರ ಬೆಂಬಲಕ್ಕೆ ನಿಂತ ಜನಾಂದೋಲನ ವೇದಿಕೆ: ತಾಲ್ಲೂಕು ಜನಾಂದೋಲನ ವೇದಿಕೆ ಪ್ರಮು ಖರಾದ ಹರಿಹರ ಆನಂದಸ್ವಾಮಿ, ಕೃಷ್ಣಯ್ಯ ಹಾಗೂ ಡಾಡೀಡ್ ಶ್ರೀಕಾಂತ್ ಗಿರಿಜನರ ಬೆಂಬಲಕ್ಕೆ ನಿಂತಿದ್ದು, ತಾಲ್ಲೂಕಿನಾದ್ಯಂತ ಹಲವು ಇಂಥಾ ಪ್ರಕರಣಗಳಿದ್ದು ಪ್ರತಿಬಾರಿ ಗಿರಿಜನರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ಇಂx Àಅನ್ಯಾಯ ಪ್ರಕರಣಗಳನ್ನು ತಾಲ್ಲೂಕು ಆಡಳಿತ ಶೀಘ್ರವಾಗಿ ಸರಿಪಡಿಸಬೇಕು ಹಾಗೂ ನೊಂದಗಿರಿಜನರಿಗೆ ಪೋಲಿಸರುರಕ್ಷಣೆ ನೀಡಬೇಕು ಎಂದುಖಾರವಾಗಿ ಎಚ್ಚರಿಸಿದ್ದಾರೆ.