ಗಿಡ ಮರಗಳನ್ನು ರಕ್ಷಣೆ ಮಾಡಿ : ಚನ್ನಬಸವ

ಕಲಬುರಗಿ,ಆ.13: ಹೆಚ್ಚಿನ ಸಂಖ್ಯೆಯಲ್ಲಿ ಗಿಡ ಮರಗಳನ್ನು ಹಚ್ಚಿ ಅದರ ರಕ್ಷಣೆ ಮಾಡ್ತಾ ಹೋದರೆ ನೈಸರ್ಗಿಕ ನಮಗೆ ಕೊಡುಗೆ ಕೊಡುತ್ತದೆ ಎಂದು ಉಪ ಪೆÇಲೀಸ್ ವರಿμÁ್ಠಧಿಕಾರಿ ಚನ್ನಬಸವ ಅವರು ಹೇಳಿದರು.

ನಗರದ ಡಿ ಆರ್ ಪೆÇಲೀಸ್ ಮೈದಾನದಲ್ಲಿ ಸಂತ ನಿರಂಕಾರಿ ಮಂಡಳ ಕಲಬುರ್ಗಿ ಶಾಖೆ ಅವರ ನೇತೃತ್ವದಲ್ಲಿ ಸಸಿ ನೀಡುವ ಕಾರ್ಯಕ್ರಮವನ್ನು ಸಸ್ಯ ನೀಡುವ ಮೂಲಕ ಚಾಲನೆಯನ್ನು ಮಾಡಿ ಮಾತನಾಡಿ ಗಿಡಮರಗಳನ್ನು ಕಡೆಯೋದನ್ನು ಬಿಟ್ಟು ಸಸಿಗಳು ನೆಟ್ಟುವ ಕೆಲಸ ಮಾಡಬೇಕೆಂದು ಹೇಳಿದರು.
ಗಿಡಮರಗಳು ನಾಶ ಮಾಡುವುದರಿಂದ ಬಿಸಿಲು ಜಾಸ್ತಿ ಬರುತ್ತಿದೆ ಮಳೆ ಬರುತ್ತಿಲ್ಲ ಇದರಿಂದ ಪರಿಸರ ಹಾಳಾಗುತ್ತಿದೆ ಅದಕ್ಕೆ ಪ್ರತಿಯೊಬ್ಬರು ಸಸಿಯನ್ನು ಬಳಸಬೇಕು ಪರಿಸರ ರಕ್ಷಿಸಬೇಕು ಎಂದು ಕಿವಿ ಮಾತು ಹೇಳಿದರು.
ಗಿಡ ಮರಗಳು ಕಡೆದು ಬರ ಪ್ರದೇಶ ಮಾಡುತ್ತಿದ್ದಾರೆ ಇದರಿಂದ ಮಳೆ ಬರುತ್ತಿಲ್ಲ ಇದರಿಂದ ಪರಿಸರ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ ಗಿಡಗಳನ್ನು ಬೆಳೆಸಿದರೆ ನಮಗೆ ಉಸಿರಾಟ ತೆಗೆದುಕೊಳ್ಳಲು ಸಹಾಯ ವಾಗುತ್ತದೆ ಎಂದು ಹೇಳಿದರು.

ಸೀತಾರಾಮ್ ಚವ್ಹಾಣ ಅವರು ಮಾತನಾಡಿ ಒಬ್ಬ ಸಾಮಾನ್ಯ ಜನ ಸೇವೆಯಲ್ಲಿ ಬಂದಾಗ ಅಹಂಕಾರವನ್ನು ಇರಬಾರದು. ಚೈತನ್ಯ ಶಕ್ತಿ ಭಾವನೆ ಇರಬೇಕು ಒಂದು ವೇಳೆ ಚೈತನ್ಯ ಶಕ್ತಿ ಇರದೇ ಹೋದರೆ ನಮ್ಮಲ್ಲಿ ಇರುವ ಅಂಗಾಂಗಗಳು ಮತ್ತು ಪಂಚ ಜ್ಞಾನೆಂದ್ರಿಗಳು, ಕಾಮೆಂದ್ರಿಯಗಳು ಅಥವಾ ಚತುಷ್ಟಯಂಗಳು ಆಗಿರಬಹುದು ಜೀವ ಆತ್ಮವಿಲ್ಲದೆ ಇವುಗಳ ಕಾರ್ಯಗಳು ನಡೆಯುವುದಿಲ್ಲ.
ಇವುಗಳ ಆಗುವುದು ಇಚ್ಛೆಯಿಂದ ಅದಕ್ಕಾಗಿ ನಮ್ಮ ಬಳಿ ಅಹಂಕಾರ ಇರಬಾರದು ಎಂದು ಹೇಳಿದರು.
ಗುರುನಾಥ ಸಿಂದೆ ಜಿ ಅವರು ಮಾತನಾಡಿ ಮನುಷ್ಯನಿಗೆ ಎಷ್ಟು ಒಳ್ಳೆಯ ಮಾತುಗಳನ್ನು ಹೇಳಿದರೆ ಏನು ತಪ್ಪು ಕೆಲಸ ಮಾಡುತ್ತದೆ ಆದರೆ ಸಸಿ ಗಿಡಗಳು ತಪ್ಪು ಕೆಲಸ ಮಾಡುವುದಿಲ್ಲ ಯಾರು ಹೋದರೆ ಏನು ಸಸಿ ಸಿ ಹಣ್ಣುಗಳು, ನೆಳ ಕೊಡುತ್ತದೆ ಹೊರತು ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಹೇಳಿದರು.
ಮನುಷ್ಯ ಏನೇನು ಮಾಡುತ್ತಾನೆ ಆದರೆ ಗುರುಗಳ ಕಡೆ ಯಾವತ್ತೂ ನೋಡುವುದಿಲ್ಲ ಒಮ್ಮೆ ಗುರುಗಳ ಕಡೆ ನೋಡಿದರೆ ಸುಂದರವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗುರು ಕಡೆ ನೋಡದೆ ಹೋದರೆ ಮನುಷ್ಯ ಮಾಯಾ ಮೋಹದಲ್ಲಿ ಸಿಲುಕಿ ಕಷ್ಟಗಳನ್ನು ಎದುರಿಸುತ್ತಿದ್ದಾನೆ ಒಮ್ಮೆ ಗುರುಗಳ ಕಡೆ ನೋಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಕಾಶ್ ವಿಭಾಗದ ಸಂತ ನಿರಂಕಾರಿ ಸಂಜು ಪವಾರ ಜೀ, ಸಂಗೀತ್ ಪ್ರಕಾಶ್ ವಹಿಸಿದ್ದ ಗೋವಿಂದ ರಾಥೋಡ್ ಅಜಯ್ ರಾಥೋಡ್ ರವಿ ಸಜ್ಜನ್, ರಾಜು ಸಾಂಗವಿಕ ಹಾಗೂ ಇನ್ನಿತರರು ಹಾಜರಿದ್ದರು.