ಗಿಡ ಮರಗಳನ್ನು ಮಕ್ಕಳಂತೆ ಪಾಲನೆ ಪೋಷಣೆ ಮಾಡಿ

ತಾಳಿಕೋಟೆ:ಜೂ.7: ಪಟ್ಟಣದ ಗಣೇಶ ನಗರ ಬಡಾವಣೆಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸಮಿತಿಯ ಸದಸ್ಯರು ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಈ ಸಮಯದಲ್ಲಿ ಮಾತನಾಡಿದ ಶ್ರೀಮತಿ ದ್ರಾಕ್ಷಾಯಿಣಿ ಜಾಲವಾದಿ ಅವರು ಪರಿಸರ ದಿನಾಚರಣೆ ಎಂದರೆ ಕೇವಲ ಸಸಿಗಳನ್ನು ನೆಡುವದಲ್ಲಾ ಅವುಗಳನ್ನು ಮಕ್ಕಳಂತೆ ಪಾಲನೆ ಪೋಷಣೆ ಮಾಡಬೇಕು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಇಂದಿನ ದಿನಮಾನದಲ್ಲಿ ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದ್ದರಿಂದ ಬಿಸಿಲಿನ ತಾಪಮಾನ ಹೆಚ್ಚುತ್ತಾ ಸಾಗಿದೆ ಮತ್ತು ಮಳೆಯ ಪ್ರಮಾಣವು ಕುಸಿಯುತ್ತಾ ಸಾಗಿದೆ ಕಾರಣ ಎಲ್ಲರೂ ಸಸಿಗಳನ್ನು ನೆಟ್ಟವರು ಮನೆಗೆ ಒಂದು ಗಿಡವನ್ನು ದತ್ತುಗೆ ಪಡೆದುಕೊಳ್ಳುವದರೊಂದಿಗೆ ಅವುಗಳನ್ನು ಪಾಲನೆ ಪೊಷಣೆ ಮಾಡುವದರೊಂದಿಗೆ ಬೆಳೆಸುವಂತಹ ಕಾರ್ಯಕ್ಕೆ ಮುಂದಾಗಬೇಕೆಂದರು.
ಈ ಸಮಯದಲ್ಲಿ ಮಿನಾಕ್ಷೀ ಮೇಣಸಿನಕಾಯಿ, ಸುರೇಖಾ ಬಿಳೇಭಾವಿ, ದ್ರಾಕ್ಷಾಯಿಣಿ ಹಿಪ್ಪರಗಿ, ಸುನಂದಾ ಬಿರಾದಾರ, ರೂಪಾ ಮನಗೂಳಿ, ಪಾರ್ವತಿ ಬಬಲೇಶ್ವರ, ಬಸಮ್ಮ ಬಾಗೇವಾಡಿ, ನೀಲಮ್ಮ ರಾಂಪೂರ, ಗೌರಮ್ಮ ಕುಂಭಾರ, ಜಯಶ್ರೀ ಪಾಟೀಲ, ಶ್ರೀಮತಿ ಕಡಕೋಳ, ಶ್ರೀಮತಿ ಬಾಕಲಿ, ಸುರೇಖಾ ಸಾಲಂಕಿ, ಮಿನಾಕ್ಷೀ ಪಾಟೀಲ, ಮೊದಲಾದವರು ಭಾಗವಹಿಸಿದ್ದರು.