ಗಿಡ ಮರಗಳನ್ನು ನೇಡೋಣ ಅವುಗಳನ್ನು ರಕ್ಷಿಸೋಣ:ನ್ಯಾ. ಎಸ್.ಕೆ.ಕನಕಟ್ಟೆ

ಬೀದರ, ಏ.23: ನಾವು ಸಸಿಗಳನ್ನು ಮೂರು ವರ್ಷ ನೋಡಿಕೊಂಡರೆ ಅವು ಮರವಾಗಿ ನೂರು ವರ್ಷ ನಮ್ಮನ್ನು ನೋಡಿಕೊಳ್ಳುತ್ತವೆ ಮತ್ತು ಹಣ್ಣು ನೀಡುತ್ತವೆ ಅದಕ್ಕಾಗಿ ಗಿಡ ಮರಗಳನ್ನ ನೇಡೋಣ ಅವುಗಳನ್ನ ರಕ್ಷಿಸೋಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ.ಕನಕಟ್ಟೆ ಹೇಳಿದರು.

ಅವರು ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾರಾಗೃಹ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾರಾಗೃಹ ಬೀದರನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚಾರಣೆ 2023 ರ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಪನ್ಯಾಸಕರಾಗಿ ಬಿ.ಎಸ್. ಪಾಟೀಲ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸವಲತ್ತುಗಳ ಬಗ್ಗೆ ಮಾತನಾಡಿದರು. ಕೇಶವರಾವ ಶ್ರೀಮಾಳೆ ಅವರು ವಿಶ್ವ ಭೂಮಿ ದಿನ ಬಗ್ಗೆ ಮಾತನಾಡಿದ್ದರು.

ಮುಖ್ಯ ಅತಿಥಿಗಳಾದ ಬಿ. ಕೃಷ್ಣಪ್ಪ ಅವರು ಕಾನೂನು ಅರಿವು ಮತ್ತು ನೆರವು ಬಗ್ಗೆ ಮಾತನಾಡಿದ್ದರು. ಇನೋರ್ವ ಅತಿಥಿಗಳಾದ ಎ.ಬಿ. ಪಾಟೀಲ ಅರಣ್ಯ ಅಧಿಕಾರಿಗಳು ಬೀದರ ಅವರು ವಿಶ್ವ ಭೂಮಿ ದಿನಾಚಾರಣೆಯ ಮಹತ್ವವನ್ನು ತಿಳಿಸಿದರು. ಹಾಗೂ ಪ್ರೇಮಶೇಖರ ಅವರು ಪರಿಸರದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಶರಣಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಪ್ಪ ಅಂಗಡಿಯವರು ಎಲ್ಲರನ್ನು ಸ್ವಾಗತಿಸಿದ್ದರು ಹಾಗೂ ಸಿದ್ದಪ್ಪ ಗೌಡ ಅವರ ಪ್ರಾರ್ಥನೆ ಗೀತೆಯನ್ನು ಹಾಡಿದರು. ಮತ್ತು ಬಸವರಾಜ ದಯಾಸಾಗರ ಅವರು ನಿರೂಪಣೆ ಮಾಡಿದ್ದರು. ಟಿ.ಬಿ. ಭಜಂತ್ರಿ ರವರು ವಂದಾನಾರ್ಪಣೆ ಮಾಡಿದರು.