ಗಿಡ ಬೆಳೆಸಿ ನಾಡು ಉಳಿಸಿ

ಕಲಬುರಗಿ: ಜೂ.6: ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ ಶಂಕರಲಾಲ ಲಾಹೋಟಿ ಕಾನೂನು ಮಹಾವಿದ್ಯಾಲಯ, ಕಲಬರಗಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ರಾಷ್ಟ್ರೀಯ ಸೇವಾ ಯೋಜನೆ, ಹಾಗೂ ಇಅಔ ಅಟub ವತಿಯಿಂದ “ವಿಶ್ವ ಪರಿಸರ ದಿನ” ಅಂಗವಾಗಿ ಎಸ್.ಎಸ್.ಎಲ್ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರಾರ್ಥಿಗಳಿಂದ ಮಹಾವಿದ್ಯಾಲಯದ ಆವರಣದಲ್ಲಿ “ಗಿಡ ಬೆಳಸಿ ನಾಡು ಉಳಿಸಿ” ಎಂಬ ದೇಯದೊಂದಿಗೆ ಸಸಿ ನೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಪಕರುಗಳಾದ ಮಹೇಶ್ವರಿ ಹಿರೇಮಠ, ಶಾಂತೇಶ್ವರಿ ಶಾಂತಗೀರಿ, ಕರುಣಾ ಪಾಟೀಲ್, ರೇಣುಕಾ ದೇವರಮನಿ, ಜ್ಯೋತಿ ಹಂಗರ್ಕಿ ಉಪಸ್ಥಿತರಿದ್ದರು. ಬೋಧಕೇತರ ಸಿಬ್ಬಂದಿಗಳಲ್ಲಿ ಪ್ರಕಾಶ ಮಾಲಿಪಾಟೀಲ್, ರಮೇಶ ಸಿಂಗ್, ಲಕ್ಷ್ಮೀ ಆರ್. ಹುಡಗಿ, ಬಸವರಾಜ ತೆಂಗಳಿ, ಸಂತೋಷ ಪಾಟೀಲ್, ಮಲ್ಲಿನಾಥ ತಡಕಲ್, ಶಿವುಕುಮಾರ, ಭಾಗಮ್ಮ, ಗುರುಬಾಯಿ, ಶಕುಂತಲಾಬಾಯಿ ಮುಂತಾದವರು ಉಪಸ್ಥತರಿದ್ದರು.