ಗಿಡ ನೆಡಿ ಪರಿಸರ ಉಳಿಸಿ: ಪರಿಸರ ನಾಶ ಮಾಡಿದರೆ ಮನುಕುಲಕ್ಕೆ ಕಂಟಕ

ಮೈಸೂರು: ಜೂ.05: ಇಂದು ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ಡಿ.ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೌಟಿಲ್ಯ ರಘು ರಘು ರವರು ಜಲದರ್ಶನಿ ಯ ಮುಂಬಾಗ ಬಾದಾಮಿ ಗಿಡ ವನ್ನು ನೆಟ್ಟಿ ಅರ್ಥಪೂರ್ಣ ವಾಗಿ ಆಚರಿಸಲಾಯಿತು.
ನಂತರ ಮಾತನಾಡಿದ ರಘು ರವರು ವಿಶ್ವ ಪರಿಸರ ಉಳಿವಿಗಾಗಿ ಪ್ರತಿ ಮನೆ ಯ ಮುಂಬಾಗ ಗಿಡ ವನ್ನು ನೆಡಬೇಕು ಹಾಗೇಯೇ ಕರೋನಾ ಎಂಬಾ ಮಹಾ ಮಾರಿ ಯನ್ನು ಹೋಗಲಾಡಿಸಲು ಆಮ್ಲಜನಕ ದ ಅವಶ್ಯಕತೆ ಇದೆ ನಾವು ವಾಸಿಸುವ ಪರಿಸರ ವನ್ನು ಕಲ್ಮಶ ಗೊಳಿಸದೆ ಸ್ವಚತೆಯಿಂದ ನಾಗರೀಕರ ರಾದ ನಮ್ಮೇಲ್ಲರ ಕರ್ತವ್ಯ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಮೊರ್ಚಾ ದ ನಗರ ಅಧ್ಯಕ್ಷರಾದ ಜೋಗಿಮಂಜು ಮಾತಾನಾಡಿ ವಾಯು ಮಾಲಿನ್ಯ,ಜಲ ಮಾಲಿನ್ಯ,ವನ್ನು ತಡೆಯಲು ಪರಿಸರ ಮುಖ್ಯ,ಯುವ ಪೀಳಿಗೆಯು ಪರಿಸರವನ್ನು ಉಳಿಸುವ ಬೇಕು,ಪರಿಸರ ನಾಶ ಮಾಡಿದರೇ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಕಂಟಕ ವಾಗಲಿದೆ,ಯುವಕರಾದ ನಾವುಗಳು ಪ್ರಕೃತಿಯ ಗಾಳಿ, ಬೆಳಕು,ಗಳನ್ನೆ ಮಾನವ ಕುಲ ಅವಲಂಬಿತವಾಗಿರುವರಿಂದ ಪರಿಸರ ಉಳಿಸುವುದು ನಮ್ಮ ಅದಮ್ಯ ಕರ್ತವ್ಯ ಎಂದರು.
ಈ ಸಂಧರ್ಭದಲ್ಲಿ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೌಟಿಲ್ಯ ರಘು,ವಿ.ವಿ.ಪುರಂ ಪೆÇೀಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ದಿವಾಕರ್,ಭಾ.ಜ.ಪ.ನಗರ ಪ್ರಧಾನ ಕಾರ್ಯದರ್ಶಿ ಗಿರೀಧರ್,ಹಿಂದುಳಿದ ವರ್ಗಗಳ ಮೋರ್ಚಾದ ನಗರ ಅಧ್ಯಕ್ಷರಾದ ಜೋಗಿಮಂಜು, ಪ್ರಧಾನ ಕಾರ್ಯದರ್ಶಿ ಗೋಪಾಲ್ ಇದ್ದರು.