ಗಿಡ ನೆಡಿ ಆಮ್ಲಜನಕ ವೃದ್ಧಿಸಿ: ಗಿಡ ನೆಟ್ಟು ಪರಿಸರ ದಿನಾಚರಣೆ

ಮೈಸೂರು: ಜೂ.05: “ಗಿಡ ನೆಡಿ ಆಮ್ಲಜನಕ ವೃದ್ಧಿಸಿ” ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿದ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಯುವಮೋರ್ಚಾ ತಂಡ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ಯುವ ಮೋರ್ಚಾ ಘಟಕದ ಆದೇಶದ ಮೇರೆಗೆ ನಗರದ ಜಲಪುರಿ ಪೆÇಲೀಸ್ ಕ್ವಾಟ್ರಸ್ ನ ಪಾರ್ಕ್ ನಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮಹಾಪೌರರಾದ ಶ್ರೀ ಸಂದೇಶ್ ಸ್ವಾಮಿ ರವರು ಹಸಿರೇ ಉಸಿರು ಇಂದಿನ ಜೀವನದಲ್ಲಿ ಆಮ್ಲಜನಕ ಎಷ್ಟು ಅವಶ್ಯಕತೆ ಎಂಬುದು ಈಗ ತಿಳಿಯುತ್ತಿದೆ ಕರೋನ ಸೋಂಕಿನಿಂದ ಅನೇಕರು ಆಸ್ಪತ್ರೆ ಸೇರುತ್ತಿದ್ದಾರೆ ಅವರಿಗೆ ಬೇಕಾಗಿರುವುದು ಆಮ್ಲಜನಿಕ ಆದರೆ ಆಮ್ಲಜನಿಕ ಮುಖ್ಯವಾಗಿ ತಯಾರಾಗಬೇಕಿರುವುದು ಪರಿಸರದಿಂದ ಪರಿಸರವನ್ನು ಬೆಳೆಸಿದರೆ ಕಾಪಾಡಿಕೊಂಡರೆ ಅದು ನಮಗೆ ನೋಡಿಕೊಳ್ಳುತ್ತದೆ ಇಲ್ಲವಾದಲ್ಲಿ ಇವತ್ತಿನ ಪರಿಸ್ಥಿತಿ ಮುಂದಕ್ಕೆ ಬಹಳಷ್ಟು ತೊಂದರೆ ಕೊಡುತ್ತದೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಒಂದೊಂದು ಸಸಿಗಳನ್ನು ನೆಟ್ಟರೆ ಆಮ್ಲಜನಕ ಹೆಚ್ಚಾಗುತ್ತದೆ ಉಸಿರಾಟವು ಆನಂದವಾಗಿರುತ್ತದೆ ಎಂದರು.
ನಂತರ ಮಾತನಾಡಿದ ಮೈಸೂರು ನಗರ ಉಪಾಧ್ಯಕ್ಷರಾದ ಟಿ ರಮೇಶ್ ರವರು ವಿಶ್ವ ಪರಿಸರ ದಿನಾಚರಣೆ ಪ್ರತಿ ವರ್ಷವೂ ಗಿಡ ನೆಡುವುದು ಮುಖ್ಯವಲ್ಲ ನೆಟ್ಟ ಗಿಡವನ್ನು ಪೆÇೀಷಣೆ ಪಾಲನೆ ಮಾಡುವುದು ಅಷ್ಟೇ ಮುಖ್ಯವಾಗುತ್ತದೆ ಆದ್ದರಿಂದ ಬಿಜೆಪಿ ನರಸಿಂಹರಾಜ ಯುವಮೋರ್ಚಾ ಅಧ್ಯಕ್ಷರಾದ ಲೋಹಿತ್ ರವರ ನೇತೃತ್ವದ ತಂಡ ಪ್ರತಿ ವರ್ಷವೂ ಸಸಿಗಳನ್ನು ನೆಡುವ ಮುಖಾಂತರ ಅದನ್ನು ಪಾಲನೆ ಪೆÇೀಷಣೆ ಮಾಡಿಕೊಂಡು ಬರುತ್ತಿದ್ದಾರೆ ಇದು ನಿಜಕ್ಕೂ ಶ್ಲಾಘನೀಯ ಮತ್ತು ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಮನೆಯ ಆವರಣದಲ್ಲಿ ಸಸಿಗಳನ್ನು ನೆಟ್ಟರೆ ಮನೆಯೆಲ್ಲಾ ಆಮ್ಲಜನಿಕ ಹೆಚ್ಚುತ್ತದೆ ಪರಿಸರ ನಾಶ ಮಾಡಬೇಡಿ ಇರುವುದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗೋಣ ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್ ರವರು ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ರಾದ ಜೈಶಂಕರ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವೇಲು, ನಗರ ಯುವ ಮೋರ್ಚಾ ಉಪಾಧ್ಯಕ್ಷ ರಾದ ಕಾರ್ತಿಕ್ ಕುಮಾರ್, ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ, ನಗರ ಕಾರ್ಯಕಾರಣಿ ಸದಸ್ಯ ಸಂತೋಷ್ ಕುಮಾರ್ ,ಕ್ಷೇತ್ರದ ಯುವ ಮೋರ್ಚಾ ಉಪಾಧ್ಯಕ್ಷ ಚೇತನ್ , ದರ್ಶನ್,ನವೀನ್ ಬಲರಾಮ್ ,ಕೀರ್ತಿ ,ಕಿಶೋರ,ಶಂಕ್ರಣ್ಣ, ಮುಂತಾದವರು ಉಪಸ್ಥಿತರಿದ್ದರು.