ಗಿಡ ನೆಟ್ಟು ಮುಖರ್ಜಿ ಪುಣ್ಯತಿಥಿ ಆಚರಣೆ

ಹುಬ್ಬಳ್ಳಿ, ಜೂ 24: ರಾಷ್ಟ್ರೀಯವಾದಿಗಳು, ಭಾರತ ಕಂಡ ಶ್ರೇಷ್ಠ ವಾಗ್ಮಿಗಳು ಮತ್ತು ಸಂಸದೀಯ ಪಟುಗಳು ಹಾಗೂ ಜನಸಂಘದ ಸಂಸ್ಥಾಪಕರಾದ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ 5000 ರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಚಿವ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು.
ಹುಬ್ಬಳ್ಳಿಯ ಕುಂಭಕೋಣಂ ಫ್ಲಾಟ್ ನಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಡಾ. ಶಾಮಪ್ರಸಾದ ಮುಖರ್ಜಿ ಅವರ ಜೀವನ ಸಾಧನೆ ಬಗ್ಗೆ ಸ್ಮರಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಮುಖರ್ಜಿಯವರ ಅಖಂಡ ಭಾರತದ ಕನಸನ್ನು ನನಸು ಮಾಡಿದ್ದಾರೆ ಎಂದು ಡಾ. ಶಾಮಪ್ರಸಾದ ಮುಖರ್ಜಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಿರಣ್ ಉಪ್ಪಾರ್ ಇವರು ಸಸಿ ನೆಡುವ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಮಾಜಿ ಪಾಲಿಕೆ ಸದಸ್ಯರಾದ ಲಕ್ಷ್ಮಣ ಉಪ್ಪಾರ, ಡಾ. ಸಚಿನ್ ಹೊಸಕಟ್ಟೆ, ಹಿರಿಯರಾದ ದತ್ತಾತ್ರೇಯ ಕಂದುಕೂರ್, ಬಿ. ಎಲ್. ಹೆಗಡೆ, ಪಾಂಡುರಂಗ್ ಪವಾರ್, ಸಂಗಮ ಹಂಜಿ, ಶಿವಯ್ಯ ಹಿರೇಮಠ, ಅಮೋಲ್ ದೇಶ್ ಕುಲಕರ್ಣಿ, ನವೀನ್ ಹತ್ತಿಬೆಳಗಲ್, ಸಚಿನ್ ಗಾಣಗೇರ್, ರಾಜು ಕಟ್ಟಿ ಮುಂತಾದವರು ಉಪಸ್ಥಿತರಿದ್ದರು.