ಗಿಡ ನೆಟ್ಟು ಪೋಷಣೆ ನಿತ್ಯದ ಕಾಯಕವಾಗಲಿ

ಕೋಲಾರ ಜೂ,೬:ಪ್ರತಿ ಮಾನವನ ಜೀವನದಲ್ಲಿ ಗಿಡ ಮರಗಳು ಜೀವನಾಡಿಯಾಗಿ ನಮ್ಮ ಬುದುಕಿನ ಕೊನೆಯ ಕ್ಷಣದವರೆಗೂ ಅಗತ್ಯವಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ಗಿಡ ನಟ್ಟು ಪೋಷಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಾನು ಪ್ರತಿನಿತ್ಯ ಗಿಡಗಳ ಪೋಷಣೆ ಮಾಡಲು ನಿರತನಾಗಿದ್ದೇನೆ ಎಂದು ಟೈಗರ್ ವಿ.ಎಂ.ವೆಂಕಟೇಶ್ ರವರು ತಿಳಿಸಿದರು
ಕೋಲಾರ ತಾಲ್ಲೂಕು ಅಣ್ಣಿಹಳ್ಳಿ ಗೇಟ್ ಬಳಿ ತಂಗುದಾಣದ ಮುಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡವನ್ನು ನೆಟ್ಟು ಆಚರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಣ್ಣಿಹಳ್ಳಿ ಶಿಕ್ಷಕಿ ಕೆ.ಎಂ. ಸುಜಾತ, ಅಣ್ಣಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ, ಬ್ಯಾಲಹಳ್ಳಿ ನಾಗರಾಜ್, ಗರುಡಪಾಳ್ಯ ಶ್ರೀರಾಮಪ್ಪ, ಕುಡುವನಹಳ್ಳಿ ಶಿಕ್ಷಕ ಕೆ.ವಿ.ಕೃಷ್ಣಪ್ಪ, ಅಣ್ಣಿಹಳ್ಳಿ ರೈತ ಗೋಪಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.