ಚಿಕ್ಕಬಳ್ಳಾಪುರ,ಜೂ.೬-ಶಾಸಕ ಪ್ರದೀಪ್ ಈಶ್ವರ್ ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸದ್ಗುರು ಸನ್ನಿಧಿಯ ಆದಿ ಯೋಗಿ ಶಿವ ಸುತ್ತಮುತ್ತಲು ಸ್ವಯಂಸೇವಕರೊಂದಿಗೆ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು
ಶಾಸಕ ಪ್ರದೀಪ್ ಈಶ್ವರ್ ಈಶ ಸಂಸ್ಥೆಯ “ಹಸಿರು ಚಿಕ್ಕಬಳ್ಳಾಪುರ” ದ ಕಾರ್ಯಕ್ರಮದ ಅಂಗವಾಗಿ ೧೦,೦೦೦ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈಶ ಸಂಸ್ಥೆಯು ಕೈಗೊಂಡಿರುವ ಉಪಕ್ರಮಗಳ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದರು ಮತ್ತು ಸಂಸ್ಥೆಯ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಿಗೆ ತಮ್ಮ ಬೇಷರತ್ ಬೆಂಬಲದ ಭರವಸೆ ನೀಡಿದರು
. ಈಶ ಸಂಸ್ಥೆಯು ಚಿಕ್ಕಬಳ್ಳಾ ಪುರದಲ್ಲಿ ವಿಶ್ವ ದರ್ಜೆಯ ಆಧ್ಯಾತ್ಮಿಕ ಕೇಂದ್ರವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿರುವುದರಿಂದ ಸರ್ಕಾರದ ಕಿರಿಯ ಶಾಸಕರಾದ ಈಶ್ವರ್ ಅವರು ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಲು ಬೆಂಬಲ ವನ್ನು ಕೋರಿದರು ಮತ್ತು ಕಷ್ಠ ಎರಡು ಸ್ಥಳೀಯ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು, ಚಿಕ್ಕಬಳ್ಳಾಪುರದ ಕ್ಷೇತ್ರದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವಂತೆ ವಿನಂತಿಸಿದರು. ಇದಕ್ಕೆ ಈಶ ತನ್ನ ಸಂಪೂರ್ಣ ಸಹಕಾರವನ್ನು ತಕ್ಷಣವೇ ನೀಡಿತು ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಸಂದರ್ಭಲ್ಲಿ ಈಶ ಸಂಸ್ಥೆಯು, ಜೂನ್ ೫ ರಂದು ತಿಪ್ಪೇನಹಳ್ಳಿ ಮತ್ತು ಅವಲಗುರ್ಕಿ ಗ್ರಾಮಗಳಲ್ಲಿ ಮರ ನೆಡುವ ಅಭಿಯಾನವನ್ನು ಕೈಗೊಂಡಿತು. ಇತ್ತೀಚೆಗೆ ಈಶ ನಡೆಸಿದ ಸಮೀಕ್ಷೆಯಲ್ಲಿ ಭಾಗವ ಹಿಸಿ, ಬೇಡಿಕೆ ಸಲ್ಲಿಸಿದ ಪ್ರತಿಯೊಬ್ಬ ರೈತರಿಗೆ, ೫ ಫಲ ನೀಡುವ ಮರದ ಸಸಿಗಳನ್ನು ಉಚಿತವಾಗಿ ಕೊಟ್ಟರು. ಕಾರ್ಯಕ್ರಮಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಸಿಗಳನ್ನು ಸ್ವೀಕರಿಸಿದರು. ತಿಪ್ಪೇನಹಳ್ಳಿ ಗ್ರಾಮ ಪಂ ಪಿ.ಡಿ.ಒ. ಬಿ.ಎಂ.ಮುನಿರಾಜು, ಗ್ರಾಪಂ ಅಧ್ಯಕ್ಷೆ ಉಷಾಮುರಳಿ ಅವರುಗಳು ಪ್ರಾಕೃತಿಕ ಸಂಪತ್ತಿನ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.
ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸಲು ‘ಕಾವೇ ರಿ ಕೂಗು’ ಅಭಿಯಾನದ ಮೂಲಕ ಈಶ ಔಟ್‌ರೀಚ್ ಪ್ರ ಪಂಚದ ಅತಿದೊಡ್ಡ ರೈತ-ಚಾಲಿತ ಪರಿಸರ ಅಭಿಯಾನವನ್ನು ಮುನ್ನಡೆಸುತ್ತಿರುವ ಹಿನ್ನೆಲೆಯಲ್ಲಿ, ಈ ಮರ ನೆಡುವ ಚಾಲನೆಯು ಮಹತ್ವದ್ದಾಗಿದೆ. ಕಾವೇರಿ ನದಿಯ ಜಲಾನ ಯನ ಪ್ರದೇಶದಲ್ಲಿನ ಕರ್ನಾಟಕ ಮತ್ತು ತಮಿಳುನಾಡಿನ ರೈತರನ್ನು ತಮ್ಮ ಖಾಸಗಿ ಕೃಷಿ ಭೂಮಿಯಲ್ಲಿ – ಅವರ ಆದಾಯದಲ್ಲಿ ಗಣಯವಾಗಿ ಹೆಚ್ಚಳ ತರುವಂತಹ ಮರ ಆಧಾರಿತ ಕೃಷಿಯನ್ನು ಕೈಗೊಳ್ಳುವಂತೆ ಉತ್ತೇಜಿಸಲು ಅವರಿಗೆ ಬೆಂಬಲವಾಗಿ ಕಾವೇರಿ ಕೂಗು ತಂಡವು ಕಾರ್ಯ ವೆಸಗುತ್ತಿದೆ. ೨೦೨೦ ರಿಂದ, ಸರ್ಕಾರವು ೯ ಕಾವೇರಿ ನದಿ ಜಲಾನಯ ನ ಜಿಲ್ಲೆಗಳಲ್ಲಿ ೪೧,೦೦೦ ಕ್ಕೂ ಹೆಚ್ಚು ರೈತರಿಗೆ ೨.೪ ಕೋಟಿ ಸಸಿಗಳನ್ನು ವಿತರಿಸಿದೆ. ಕಾವೇರಿ ಕೂಗು ತಂಡವು ಕರ್ನಾ ಟಕ ಸರ್ಕಾರದ ಸಹಯೋಗದಲ್ಲಿ, ೧೮೦೦ ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿ ಸುವತ್ತ ಕೆಲಸ ಮಾಡುತ್ತಿದೆ ಮತ್ತು “ರೈತ ಸಹಾಯವಾಣಿ ಮತ್ತು ವಾಟ್ಸಾಪ್ ಗುಂಪುಗಳ” ಮೂಲಕ, ಕಾವೇರಿ ಕೂಗು ತಂಡವು ೫೧,೫೦೦ ಕ್ಕೂ ಹೆಚ್ಚು ರೈತರಿಗೆ ಅಗತ್ಯ ಬೆಂಬಲ ನಿಡುವಲ್ಲಿ ಕಾರ್ಯಗತವಾಗಿದೆ.