ಗಿಡಮೂಲಿಕೆಗಳ ದಿನಾಚರಣೆ ಅಂಗವಾಗಿ
ಪತಂಜಲಿ ಸಾವಯವ ಕೃಷಿ ಸಮ್ಮಾನ ಪ್ರಶಸ್ತಿ ಪ್ರದಾನ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ.5: ಪ್ರತಿಯೊಬ್ಬನು ಕನಿಷ್ಠ ಒಂದು ಸಸಿಯನ್ನು ಪಾಲನೆಪೋಷಣೆ ಮಾಡಬೇಕು.ಅಂದಾಗ ಮಾತ್ರ ನಮ್ಮ ಪರಿಸರವನ್ನು ಸ್ವಚ್ಛ ಮತ್ತು ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು ಎಂದು ಕೂಡ್ಲಿಗಿಯ ಸಾವಯವ ಕೃಷಿ ಸಾಧಕ ನಾಗರಾಜ ಕೊಟ್ರಪ್ಪನವರ ಅಭಿಪ್ರಾಯಪಟ್ಟರು.
ವಿಜಯನಗರ ಜಿಲ್ಲಾ ಪತಂಜಲಿ ಕಿಸಾನ್ ಸೇವಾ ಸಮಿತಿಯು ಹೊಸಪೇಟೆ ನಗರದ ಗಾಂಧಿ ಕಾಲೋನಿಯ ನ್ಯೂ ಬಲ್ಡೋಟಾ ಪಾರ್ಕಯೋಗಕೇಂದ್ರದಲ್ಲಿ ಹರಿದ್ವಾರದ ಪತಂಜಲಿ ಯೋಗ ಪೀಠದ ಆಯುರ್ವೇದತಜ್ಞ ಆಚಾರ್ಯ ಬಾಲಕೃಷ್ಣಜೀ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಗಿಡಮೂಲಿಕೆಗಳ ದಿನಾಚರಣೆಯಲ್ಲಿ ಪತಂಜಲಿ ಸಾವಯವ ಕೃಷಿ ಸಮ್ಮಾನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ನಾವು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಂಪೂರ್ಣ ಆರೋಗ್ಯ ಪೂರ್ಣವಾಗಿರಲು ನಮ್ಮ ಸುತ್ತಮುತ್ತಲ ಪರಿಸರ ಶುದ್ಧವಾಗಿರಬೇಕು. ಅದಕ್ಕಾಗಿ ನಾವೆಲ್ಲರೂ ನಮ್ಮ ಮನೆಯ ಕಂಪೌಂಡನಲ್ಲಿ ವಿವಿಧ ರೀತಿಯ ಆಯುರ್ವೇದ ಗಿಡಮೂಲಿಕೆಗಳನ್ನು ಬೆಳೆಸಬೇಕು. ಅವುಗಳ ಮುಖಾಂತರ ನಾವು ಆರೋಗ್ಯ ಪೂರ್ಣವಾಗಿರಲು ಸಾಧ್ಯ ಎಂದು ಹೇಳಿದರು.
ಕಮಲಾಪುರದ ಸಾವಯವ ಕೃಷಿ ಸಾಧಕ ಪ್ರಶಾಂತಸಿಂಗ್ ಅವರು ಪತಂಜಲಿ ಸಾವಯವ ಕೃಷಿ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತ, ನಾವು ಎಷ್ಟೇ ಡಿಗ್ರಿ ಶಿಕ್ಷಣ ಪಡೆದುಕೊಂಡರೂ ಕೃಷಿಯಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಕೊನೆಗೆ ಬೆಳೆ ಬೆಳೆಯುವ ರೈತನಿಗೆ ನಾವು ಗೌರವ ನೀಡಬೇಕು. ಆತನಿಗೆ ಪ್ರೊತ್ಸಾಹ ನೀಡಬೇಕು. ಇಂದಿನ ರಾಸಾಯನಿಕ ಔಷಧಿಗಳ ಬಳಕೆಯಿಂದಾಗಿ ನಾವು ಬೆಳೆಯುವ ಬೆಳೆಗಳು ವಿಷಕಾರಿಯಾಗುತ್ತಿವೆ. ಅದರಿಂದಾಗಿ ಅನೇಕ ಕಾಯಿಲೆಗಳು ಬರುತ್ತಿವೆ. ಇವುಗಳನ್ನು ದೂರಮಾಡಬೇಕೆಂದರೆ ಸಾವಯವ ಕೃಷಿಯತ್ತ ಗಮನಹರಿಸಬೇಕು ಎಂದರು.
ಪತಂಜಲಿ ಕಿಸಾನ್ ಸೇವಾ ಸಮಿತಿಯಜಿಲ್ಲಾ ಪ್ರಭಾರಿ ಕೃಷ್ಣ ನಾಯಕ ಸ್ವಾಗತಿಸಿದರು, ಮಹಿಳಾ ಪತಂಜಲಿ ಯೋಗ ಸಮಿತಿಯರಾಜ್ಯ ಸಹಪ್ರಭಾರಿ ದಾಕ್ಷಾಯಣಿ ಶಿವಕುಮಾರ, ಯುವ ಭಾರತ್ ಸಂಘಟನೆಯ ಕಿರಣಕುಮಾರ್ ಉಪಸ್ಥಿತರಿದ್ದರು.
ಅಶೋಕ ಚಿತ್ರಗಾರಅವರು ಪ್ರಾರ್ಥನೆ ನಡೆಸಿಕೊಟ್ಟರು. ಎಂಎಸ್.ಪಿ.ಎಲ್. ಸಂಸ್ಥೆಯ ಅಧಿಕಾರಿ ರಮೇಶ, ಉಮಾ ವಿಶ್ವನಾಥ, ಶಿವಮೂರ್ತಿ. ವೀರೇಶಬಾಬು, ಸತ್ಯಪ್ಪ, ಮಾರುತಿ ಪೂಜಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.