
ಸಂಜೆವಾಣಿ ವಾರ್ತೆ
ಕುರುಗೋಡು:ಜು.08: ಪಟ್ಟಣ ಸಮೀಪದ ಬಾದನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ಕಾಡು ಉಳಿಸಿ ನಾಡು ಬೆಳೆಸಿ ಕಾರ್ಯಕ್ರಮದಡಿ ವನಮಹೋತ್ಸವ ಆಚರಿಸಲಾಯಿತು.
ಗಿಡನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯ ಪ್ರಭಾರ ಶಿಕ್ಷಕ ಜಗದೀಶ್, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾದ ಪರಿಣಾಮ ವಾತಾವರಣ ಕಲುಷಿತವಾಗಿತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗಿಡಮರಗಳನ್ನು ಬೆಳೆಸಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಅಗತ್ಯವಿದೆ. ಮನೆಯ ಸುತ್ತಮುತ್ತಲಿನ ಬಯಲು ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸಿ ಹಸಿರು ವಲಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಗಾಳಿ ಬಸವರಾಜ ಮಾತನಾಡಿ, ಪರಿಸರ ಮಾಲಿನ್ಯ ತಡೆಯಲು ಅರಣ್ಯ ಇಲಾಖೆ ಗಿಡಮರಗಳನ್ನು ಬೆಳೆಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಸದುಪಯೋಗ ಪಡಿಸಿಕೊಂಡು ಗಿಡಮರಗಳನ್ನು ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಗಂಗಣ್ಣ, ಪ್ರತಾಪ್, ಹೂಗಾರ್ ಗಂಗಣ್ಣ, ಸುರೇಶ್, ಹುಸೇನಪ್ಪ, ಪ್ರಸಾದ್ ಮತ್ತು ಲಕ್ಷ್ಮಣ್ ಇದ್ದರು.
One attachment • Scanned by Gmail