ಗಿಡಬೆಳಸಿ ಭೂಮಿ ಉಳಿಸಿ ಜಾಗೃತಿ ಕಾರ್ಯಕ್ರಮ

ಮೈಸೂರು: ಜೂ.11: ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾದರ ಶ್ರೀ ಕೆ.ಎಸ್.ಈಶ್ವರಪ್ಪ ಜೀ ರವರ ಹುಟ್ಟುಹಬ್ಬವನ್ನು ಮೈಸೂರು ನಗರದ ಅಭಿಮಾನಿ ಬಳಗದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಸ್ತು ಪ್ರದರ್ಶನದ ಪ್ರಾಧಿಕಾರದ ಸುತ್ತ ಮುತ್ತ ಹೊಂಗೆ, ಬೇವು, ನೇರಳೆ, ಹಲಸು, ಗಿಡಗಳನ್ನು ಹಾಕುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ನಂತರ ವಸ್ತು ಪ್ರದರ್ಶನದ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಗೌಡ ರವರು ಮಾತನಾಡಿ ಈ ರಾಜ್ಯದ ಹಿಂದುಳಿದ ವರ್ಗಗಳ ನಾಯಕರಾಗಿ ಹಾಗೂ ಭಾ.ಜ.ಪ.ತಳಮಟ್ಟದ ಕಾರ್ಯಕರ್ತರಾಗಿ ಬಿ.ಜೆ.ಪಿ ಯ ಬೆಳವಣಿಗೆ ಗೆ ಇಂತಹ ನಾಯಕರ ಶ್ರಮ ಅತ್ಯಮೂಲ್ಯ ,ನಾವು ಪ್ರಕೃತಿ ಮಾತೆಯ ಮಡಿಲಲ್ಲಿ ವಾಸಿಸುತ್ತಿದ್ದೇವೆ.
ಪ್ರಕೃತಿ ನಮಗೆ ಅನ್ನ, ನೀರು, ಗಾಳಿ ಇವೆಲ್ಲವನ್ನೂ ನೀಡುತ್ತದೆ. ಪ್ರತಿಯೊಂದು ವಿಷಯದಲ್ಲಿ ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ನಾವು ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದೇವೆ. ಪರಿಸರಕ್ಕೆ ಹಾನಿ ಮಾಡಿದರು ಅದು ಖಂಡಿತವಾಗಿಯೂ ಸಹಿಸದು.
ಇದರ ಕೆಟ್ಟ ಪರಿಣಾಮವನ್ನು ನಾವು ಅನುಭವಿಸಲೇ ಬೇಕಾಗುತ್ತದೆ. ಪ್ರಕೃತಿ ನಾಶವಾದರೇ ಮಾನವನ ಸಂತತಿಯೇ ವಿನಾಶದಂಚಿಗೆ ತಲುಪುತ್ತದೆ. ಆದ್ದರಿಂದ ನಮಗೂ ಹಾಗು ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬೆಳೆಸುವಲ್ಲಿ ಕಾಳಜಿ ವಹಿಸಬೇಕು. `ಗಿಡ ಬೆಳೆಸಿ-ನೆಲ ಉಳಿಸಿ’ ಈ ಆಂದೋಲನದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ನಗರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಚ ಜೋಗಿಮಂಜು ಮಾತನಾಡಿ ಈಶ್ವರಪ್ಪ ನವರು ನಮ್ಮ ನಾಯಕರು ಪರಿಸರದ ದೃಷ್ಟಿಯಿಂದ ನೂರಾರು ವಿವಿಧ ತಳಿಯ ಗಿಡ ಗಳನ್ನು ನೆಟ್ಟಿ ಅದರ ಪೆÇೀಷಣೆ ಮಾಡುವ ಮೂಲಕ ಕೋವಿಡ್ 19 ನನ್ನು ಈ ದೇಶದಿಂದಲೇ ದೂರ ಅಟ್ಟುವ ಕೆಲಸ ಕ್ಕೆ ಎಲ್ಲಾ ನಾಗರೀಕರು ಕೈ ಜೋಡಿಸಬೇಕು ಹಾಗೇಯೆ ತಾಯಿ ಚಾಮುಂಡೇಶ್ವರಿ ಯು ಇವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಂದು ತಿಳಿಸಿದರು.
ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಕೆ.ಜೆ. ರಮೇಶ್,ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್, ಜಯರಾಮ್, ನಗರ ಹಿಂದುಳಿದ ವರ್ಗಗಳ ಮೊರ್ಚಾದ ನಗರ ಅಧ್ಯಕ್ಷ ಜೋಗಿಮಂಜು, ಶಿವರಾಜ್, ಸತೀಶ್, ಶರತ್, ರಮೇಶ್, ಗಿರೀಶ್, ರಾಜೇಂದ್ರ, ಮುರುಗೇಶ್, ಕಾರ್ತಿಕ್ ಮುಂತಾದವರು ಇದ್ದರು.