ಗಿಡನೆಟ್ಟಿ ವಿಶ್ವ ಆರೋಗ್ಯ ದಿನ ಆಚರಣೆ

ಕೋಲಾರ, ಏ.೮: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ಮತ್ತು ರೋಟರಿ ಕೋಲಾರ ನಂದಿನಿ ವತಿಯಿಂದ ಸ್ಕೌಟ್ಸ್ ಭವನದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಕ್ತರಾದ ಕೆ.ಆರ್.ಸುರೇಶ್, ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು. ಜಿಲ್ಲಾ ಸಂಘಟಕ ವಿ.ವಿಶ್ವನಾಥ್, ಯುವ ಸಮಿತಿ ಸದಸ್ಯರಾದ ನಿರಂಜನ್, ತೇಜೊನಂದ, ಅಕ್ಷಯ್, ವಿಜ್ಞೇಶ್ ಮುಂತಾದವರು ಉಪಸ್ಥಿತರಿದ್ದರು.