
ಕಲಬುರಗಿ:ಮಾ.31: ಬೇಸಿಗೆ ಕಾಲ ಆರಂಭದಲ್ಲಿಯೇ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ವಾತಾವರಣದ ಉಷಾಂಶ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಗಿಡ-ಮರಗಳು ತೇವಾಂಶ ಕಳೆದುಕೊಂಡು ಬತ್ತುವ ಸಂಭವವಿರುವದರಿಂದ ವಿಶೇಷವಾಗಿ ಬೇಸಿಗೆ ದಿವಸಗಳಲ್ಲಿ ನೀರುಣಿಸುವ ಮೂಲಕ ಗಿಡಗಳನ್ನು ಸಂರಕ್ಷಿಸುವುದು ಹೆಚ್ಚು ಅಗತ್ಯವಾಗಿದೆ ಎಂದು ಜೀವಶಾಸ್ತ್ರ ಉಪನ್ಯಾಸಕಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಶುಕ್ರವಾರ ಜರುಗಿದ ಗಿಡಗಳಿಗೆ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ರಾಜ್ಯಶಾಸ್ತ್ರ ಉಪನ್ಯಾಸಕ ರವೀಂದ್ರಕುಮಾರ ಬಟಗೇರಿ ಮಾತನಾಡಿ, ಗಿಡ-ಮರಗಳನ್ನು ಮಗುವಿನಂತೆ ರಕ್ಷಣೆ ಮಾಡಬೇಕು. ಇದರಿಂದ ಪರಿಸರ ಸಮತೋಲನವಾಗಿರಲು ಸಾಧ್ಯವಿದೆ. ಅರಣ್ಯಗಳ ಪ್ರಮಾಣ ಕಡಿಮೆಯಾಗಿದ್ದರಿಂದಲೇ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೆ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ ಎಂದರು.
ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ರೇಣುಕಾ ಚಿಕ್ಕಮೇಟಿ, ಸ್ವಯಂ ಸೇವಕರಾದ ಶ್ರವಣಕುಮಾರ ಭಜಂತ್ರಿ, ಅಲ್ತಾಫ್ ನಧಾಫ್ ಸೇರಿದಂತೆ ಮತ್ತಿತರರಿದ್ದರು.