ಗಿಡಗಳನ್ನು ನೆಟ್ಟು ಸರಳ ಜನ್ಮದಿನಾಚರಣೆ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ- ಬೋಸರಾಜು
ರಾಯಚೂರು.ಜು.೦೫.ಎಐಸಿಸಿ ಕಾರ್ಯದರ್ಶಿ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್ ಎಸ್ ಬೋಸರಾಜು ತಮ್ಮ ಅವರು ಹುಟ್ಟು ಹಬ್ಬದ ಪ್ರಯುಕ್ತ ನಗರದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸರಳವಾಗಿ ಜನ್ಮ ದಿನ ಆಚರಿಸಿಕೊಂಡರು.
ನಗರದ ಶ್ರೀ ರಾಮ ನಗರ ಕಾಲೋನಿಯ ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಗಿಡಗಳನ್ನು ನೆಟ್ಟುರು.
ಪರಿಸರವನ್ನು ನಾವು ರಕ್ಷಣೆ ಮಾಡಿದರೆ ನಮ್ಮನ್ನು ಪರಿಸರ್ ರಕ್ಷಿಸುತ್ತದೆ. ಆರೊಗ್ಯಕರ ಸಮಾಜಕ್ಕೆ ಪರಿಸರವೇ ಔಷದವಾಗಿದೆ ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಪರಿಸರ ರಕ್ಷಿಸಬೇಕೆಂದರುಚ.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಅಬ್ದುಲ್ ಕರೀಂ, ಜಿ ಶಿವಮೂರ್ತಿ, ಮಹಾಲಿಂಗ, ಎಸ್ .ಎಸ್ ಹಿರೇಮಠ, ಮೀನಪ್ಪ ವಕೀಲರು, ನರಸಣ್ಣ, ಎನ್ ಎಮ್ ನಾಯಕ, ಪಂಪಾಪತಿ, ಆಕಾಶ, ಸುಹಾಸ ಮಾನಸಗಲ್, ದೇವೆಂದ್ರ, ನಾಗರಾಜ, ಸೂಗಪ್ಪ ವಕೀಲರು ಸೇರಿದಂತೆ ಇತರರು ಇದ್ದರು.