ಗಿಡಗಳನ್ನು ನೆಟ್ಟು, ಮಗುವಿನಂತೆ ಪೋಷಿಸಿ

ಕಲಬುರಗಿ.ಸೆ.20: ಅರಣ್ಯಗಳ ಪ್ರಮಾಣ ಕಡಿಮೆಯಾಗಿ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೆ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಪ್ರತಿಯೊಂದು ಜೀವರಾಶಿ ಉಳಿಯಬೇಕಾದರೆ ಪರಿಸರದ ಸಂರಕ್ಷಣೆÉ ಅಗತ್ಯ. ಅದಕ್ಕಾಗಿ ಎಲ್ಲರು ಒಂದು ಗಿಡ ನೆಟ್ಟು ಅದನ್ನು ಮಗುವಿನಂತೆ ಪೋಷಿಸಿದರೆ ನಮ್ಮ ದೇಶ ಹಸಿರುಮಯವಾಗಲು ಸಾಧ್ಯವಾಗುತ್ತದೆ ಎಂದು ಪರಿಸರ ಪ್ರೇಮಿ ನೀಲಕಂಠಯ್ಯ ಹಿರೇಮಠ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಶಿವಾ ವಿದ್ಯಾಮಂದಿರ ಪ್ರೌಢಶಾಲೆಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಗಿಡ ನೆಡುವ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅರಣ್ಯಗಳ ಪ್ರಮಾಣ ಹೆಚ್ಚಾಗಿದೆ. ಅಂದರೆ ಅಭಿವೃದ್ಧಿಗೂ, ಅರಣ್ಯಗಳ ಪ್ರಮಾಣಕ್ಕೂ ನೇರವಾದ ಸಂಬಂಧವಿದೆ ಎಂದರ್ಥವಾಗಿದೆ. ಅರಣ್ಯಗಳಿಂದ ಸಾಕಷ್ಟು ಪ್ರಯೋಜನೆಗಳಿವೆ. ಕಲಬುರಗಿ ಜಿಲ್ಲೆಯಲ್ಲಿ ಕೇವಲ ಶೇ.4ರಷ್ಟು ಅರಣ್ಯ ಪ್ರದೇಶವಿದ್ದು, ಅದಕ್ಕಾಗಿ ಅತಿ ಹೆಚ್ಚಿನ ಬಿಸಿಲಿನ ಬೇಗೆಗೆ ನಾವು ಒಳಗಾಗಬೇಕಾಗಿದೆ. ಎಲ್ಲೆಡೆ ವ್ಯಾಪಕವಾಗಿ ಗಿಡ ನೆಟ್ಟು ಪೋಷಿಸುವ ಕಾರ್ಯವಾಗಬೇಕು. ಪರಿಸರದ ಮೇಲೆ ಮಾನವನ ದಬ್ಬಾಳಿಕೆ ಬೇಡ. ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಪರಿಸರದ ಮೂಲ ಸ್ಥಿತಿಯನ್ನು ಕಾಪಾಡುವುದು ಪ್ರಸ್ತುತ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಪ್ಪ ಗಣಮುಖಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಸಹ ಶಿಕ್ಷಕರಾದ ಸ್ವಾತಿ ಆರ್.ಪಿ, ಲಕ್ಷ್ಮೀ ಬಿ.ಟಿ, ವಿಜಯಲಕ್ಷ್ಮೀ ಪಾಟೀಲ, ಕಾಶಮ್ಮ ಎಸ್.ಚಿನ್ಮಳ್ಳಿ, ಸಾವಿತ್ರಿ ಎನ್, ಖಮರುನ್ನಿಸ್ ಶೇಖ್, ಈಶ್ವರಿ, ಪ್ರೀತಿ ಎಸ್.ಕಲ್ಲಾ, ಮಾಯಾದೇವಿ ಟಿ.ಅಣುರೆ, ಚಂದ್ರಲೇಖಾ ಎಸ್.ಪಿ, ಶಿಲ್ಪಾ ಎಸ್.ಖೇಡ್, ರೋಹಿತ್ ಸಿ.ವೈ, ಪ್ರೀತಿ ಜೆ.ಬಿ ಹಾಗೂ ವಿದ್ಯಾರ್ಥಿಗಳು ಇದ್ದರು.