ಗಿಡಗಳನ್ನು ನೆಟ್ಟು ಪೋಷಿಸಿದರೆ ಪರಿಸರ ಸಮತೋಲನೆ : ಸಾಗರ

ಕಲಬುರಗಿ: ಜು.20:ಅರಣ್ಯಗಳ ಪ್ರಮಾಣ ಕಡಿಮೆಯಾಗಿ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೆ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಪ್ರತಿಯೊಂದು ಜೀವರಾಶಿ ಉಳಿಯಬೇಕಾದರೆ ಪರಿಸರದ ಸಂರಕ್ಷಣೆÉ ಅಗತ್ಯ. ಅದಕ್ಕಾಗಿ ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸಿದರೆ ಪರಿಸರ ಸಮತೋಲನ ಸಾಧ್ಯವಾಗುತ್ತದೆ ಎಂದು ಪ್ರಾಚಾರ್ಯ ಮೊಹಮ್ಮದ್ ಅಲ್ಲಾಉದ್ದೀನ್ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ಬುಧವಾರ ಗಿಡ ನೆಟ್ಟು ನಂತರ ಅವರು ಮಾತನಾಡುತ್ತಿದ್ದರು.
ಪರಿಸರ ಪ್ರೇಮಿ, ಭೌತಶಾಸ್ತ್ರ ಉಪನ್ಯಾಸಕ ಶಂಕ್ರೆಪ್ಪ ಹೊಸದೊಡ್ಡಿ ಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅರಣ್ಯಗಳ ಪ್ರಮಾಣ ಹೆಚ್ಚಾಗಿದೆ. ಅಂದರೆ ಅಭಿವೃದ್ಧಿಗೂ, ಅರಣ್ಯಗಳ ಪ್ರಮಾಣಕ್ಕೂ ನೇರವಾದ ಸಂಬಂಧವಿದೆ ಎಂದರ್ಥವಾಗಿದೆ. ಅರಣ್ಯಗಳಿಂದ ಸಾಕಷ್ಟು ಪ್ರಯೋಜನೆಗಳಿವೆ. ಮನೆಯ ಸುತ್ತಲು ಗಿಡಗಳನ್ನು ನೆಡಬೇಕು. ಪರಿಸರ ಕಾಪಾಡಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಪ್ರಕಾಶ ಪಾಟೀಲ, ಸಮೀನಾ ಬೇಗಂ, ರಂಜಿತಾ ಠಾಕೂರ, ಶರಣಗೌಡ ಪಾಟೀಲ, ಸಿದ್ದಮ್ಮ ಬೋಗನಳ್ಳಿ, ನಾಗಮ್ಮ ಹಾದಿಮನಿ, ಪ್ರ.ದ.ಸ ನೇಸರ ಎಂ.ಬೀಳಗಿಮಠ, ಸೇವಕ ಭಾಗಣ್ಣ ಹರನೂರ, ನಾಗರಾಜ ಸೇರಿದಂತೆ ಮತ್ತಿತರರಿದ್ದರು.