ಗಾವಠಾಣದಲ್ಲಿನ ಮನೆಗಳ ತೆರವುಗೊಳಿಸುವವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ

(ಸಂಜೆವಾಣಿ ವಾರ್ತೆ)
ಇಂಡಿ :ಎ.24:ತಾಲೂಕಿನ ರೋಡಗಿ ಗ್ರಾಮದಲ್ಲಿನ ಸರ್ವೆ ನಂಬರ 29 ,30/2 ಹಾಗೂ 237 ಮೂರು ಜಮೀನುಗಳ ಡ ಸಂಖ್ಯೆ 1230 ಗಾವಠಾಣ ಜಾಗದಲ್ಲಿ ಬಡವರು ಕಟ್ಟಿಕೊಂಡಿರುವ ಮನೆಗಳನ್ನು ಗ್ರಾಮದ ಕೆಲವರು ತಮ್ಮ ಜಮೀನು ಇದೆ ಎಂದು ತೆರೆವುಗೊಳಿಸಲು ಹೊರಟಿರುವದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಲಾಳಸಂಗಿ ಗ್ರಾಪಂ ಪಿಡಿಒ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
1970 ರಂದು ಹೊಸ ಗಾವಠಾಣ ದಾಖಲು ಮಾಡಿಕೊಳ್ಳಲು ಈ ಸರ್ವೆ ಸಂಖ್ಯೆಯ ಜಮೀನು ಸ್ವಾ„ನಪಡಿಸಿಕೊಳ್ಳಲಾಗಿದೆ.ಇದು ಮೂಲ ಗಾವಠಾಣ ಇದ್ದು,ಸಧ್ಯ ಸದರಿ ಸರ್ವೆ ಸಂಖ್ಯೆಯ ಜಮೀನು ಗ್ರಾಮದ ಕೆಲವರು ನಮ್ಮ ಜಮೀನು ಇದೆ ಎಂದು ಗಾವಠಾಣದಲ್ಲಿ ನಿರ್ಮಿಸಿಕೊಂಡು ಸುಮಾರು 30 ವರ್ಷಗಳಿಂದ ಬದುಕು ಸಾಗಿಸುತ್ತಿರುವ ಕುಟುಂಬಗಳ ಮನೆಗಳನ್ನು ತೆರವುಗೊಳಿಸಬೇಕು ಎಂದು ಹೆದರಿಕೆ ಹಾಕುತ್ತಿದ್ದು,ಕೂಡಲೆ ಇದನ್ನು ನಿಲ್ಲಿಸಬೇಕು. ಗಾವಠಾಣ ಜಮೀನದಲ್ಲಿ ವಾಸವಾಗಿರುವ ಬಡಕುಟುಂಬಗಳ ಮನೆಗಳನ್ನು ಖಾಸಗಿ ಅವರು ತೆರವುಗೊಳಿಸುವುದನ್ನು ತಡೆಯಬೇಕು.ಬಡವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಪಂ ಉಪಾಧ್ಯಕ್ಷೆ ಶ್ವೇತಾ ಬಬಲೇಶ್ವರ, ಸದಸ್ಯ ರಾಜಶೇಖರ ಮಾಳ,ವಿರೂಪಾಕ್ಷಯ್ಯ ಗಚ್ಚಿನಮಠ, ಸಂಗಣ್ಣ ಈರಾಬಟ್ಟಿ, ಪ್ರಭುಲಿಂಗ ಬಬಲೇಶ್ವರ, ಲೋಕೇಶ ಪೂಜಾರಿ, ಶಿವಲಿಂಗ ತಲಾರಿ,ಹಣಮಂತ ಸೊನ್ನದ, ಗುರುನಾಥ ಗುಡೆದ, ಸಿದ್ದು ಹಾದಿಮನಿ, ಶ್ರೀಶೈಲ ಗುಡೇದ,ಶಂಕರ ದೊಡ್ಡಮನಿ, ಮಲ್ಲಿಕಾರ್ಜುನ ಉಡಗಿ, ಪ್ರಭುಲಿಂಗ ನಾವಿ, ಭೀಮಾಬಾಯಿ ನಾವಿ, ಕಮಲಾಬಾಯಿ ಹದರಿ, ದೇವೆಂದ್ರ ನಿಂಬಾಳ,ವಿದ್ಯಾ ನಿಂಬಾಳ,ನಿಂಗಪ್ಪ ಪೂಜಾರಿ, ಭೀಮಣ್ಣ ಪೂಜಾರಿ, ಲಕ್ಕವ್ವ ಪೂಜಾರಿ, ಅಂಬಿಕಾ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.