ಗಾಳಿ ಮಳೆಯಿಂದ ಅನಾಹುತ ಸಂಭವಿಸಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಣೆ

ಬೀದರ್:ಜು.9: ತಾಲೂಕಿನ ಬುಧೇರಾ ಗ್ರಾಮದಲ್ಲಿ ಇತ್ತೀಚೆಗೆ ಗಾಳಿ ಮಳೆಯಲ್ಲಿ ಅವಘಡ ಸಂಭವಿಸಿ ಮೃತಪಟ್ಟ
ಸಂತ್ರಸ್ತೆ ಕುಮಾರಿ ಪಾಯಲ್ ಅವರ ಕುಟುಂಬಕ್ಕೆ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಸಾಂತ್ವನ ಹೇಳಿ ಪರಿಹಾರ ಧನದ 5 ಲಕ್ಷ ರೂ. ಚೆಕ್ ವಿತರಿಸಿದರು.
ಅಂದು ಅವಘಡ ಸಂಭವಿಸಿದ ದಿನದಂದು ಅವರು ಬೆಂಗಳೂರಿನಲ್ಲಿ ಇದ್ದರು ಖುದ್ದಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡಿಸಿ ದೂರವಾಣಿ ಮೂಲಕ ಸಂಬಂಧಪಟ್ಟ ವೈದ್ಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇದ್ದು ಉತ್ತಮ ಚಿಕಿತ್ಸೆ ನೀಡಲು ತಿಳಿಸಿದ್ದರು ಅಂದು ಗಾಯಾಳು ಬಾಲಕಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಧನ ಒದಗಿಸುವ ಭರವಸೆ ನೀಡಿದರು ಅಂತಯೇ ಇಂದು ಸಂತ್ರಸ್ತೆ
ಮನೆಗೆ ತೆರಳಿ ಸರ್ಕಾರದಿಂದ 5 ಲಕ್ಷ ಚೆಕ್ ಪರಿಹಾರ ಒದಗಿಸಿ ಇಂದು ವಿತರಿಸಿದರು.
ಪರಿಹಾರ ಧನದ ಚೆಕ್ ವಿತರಿಸಿದರು ಬಳಿಕ ಮಾತನಾಡಿದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮೃತಪಟ್ಟ ಬಾಲಕಿ ಪಾಯಲ್ ಬದುಕುಳಿಯಲು ವೈದ್ಯರು, ನಾವು ನೀವೆಲ್ಲ ಬಹಳ ಪ್ರಯತ್ನ ಪಟ್ಟೆವು ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದು ಬಹಳ ದುಃಖವಾಯಿತು. ಅಂದು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಧನ ಒದಗಿಸುವ ಭರವಸೆ ನೀಡಿದ್ದೆ ಇಂದು ಪರಿಹಾರ ಚೆಕ್ ವಿತರಣೆ ಮಾಡಿದ್ದೇನೆ ಬಾಲಕಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದರು. ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಎಚ್ಚರ ವಹಿಸಿ ವಾಸಿಸಬೇಕು ಮತ್ತು ಜಮೀನಿನಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ವಿಎ ಸುಮಂಗಲಾ, ಗ್ರಾಮದ ಮುಖಂಡರಾದ ವಿಶ್ವನಾಥ್ ಪಾಟೀಲ್, ವೈಜಿನಾಥ ಕಾಡವಾದೆ,ಶಿವರಾಜ ಕೋರೆ
ನವೀನ ಬೋರ್ಗಿ,ಪ್ರಭುರೆಡ್ಡಿ,ಜಾನಿಮಿಯ್ಯಾ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.