ಗಾಳಿ, ಮಳೆಗೆ ಬೆಳ ನಾಷ : ಪರಿಹಾರಕ್ಕೆ ಒತ್ತಾಯ

ರಾಯಚೂರು.ಏ.೨೩- ನಿನ್ನೆ ಸುರಿದ ಬಾರಿ ಗಾಳಿ ಮಳೆಗೆ ತಾಲೂಕಿನ ದೇವಸೂಗೂರು ಹೋಬಳಿಯ ಗಂಜಳ್ಳಿ ಗ್ರಾಮದಲ್ಲಿ ಬಹಳಷ್ಟು ಬೆಳೆ ನಾಶವಾಗಿದೆ.
ಪ್ರತಿ ವರ್ಷ ಇದೇ ತರ ನಾಶದ ನರಕವನ್ನು ರೈತರು ಅನುಭವಿಸುತ್ತಿದ್ದಾರೆ. ಆದರೆ ಬೆಳೆ ನಷ್ಟ ಪರಿಹಾರ ಮಾತ್ರ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಬೆಳೆ ಹಾನಿಗೆ ಒಳಗಾದ ರೈತರಿಗೆ ಪರಿಹಾರವನ್ನು ಒದಗಿಸಿಕೊಟ್ಟರು ಅಲ್ಲಿರುವ ಅಧಿಕಾರಿಗಳು ಪರಿಹಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ದೇವರು ವರ ಕೊಟ್ಟರು ಪೂಜಾರಿ ವರಕೊಡಲಿಲ್ಲ ಎನ್ನುವಂತಾಗಿದೆ. ರೈತರ ಬದುಕು ತೊಂದರೆಯಲ್ಲಿದ್ದರು ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವುದಿಲ್ಲವೆಂದು ದೂರಿದರು.
ಗ್ರಾಮ ಲೆಕ್ಕಾಧಿಕಾರಿ ಸರ್ವೇ ನಂ. ಒಬ್ಬರಿದ್ದಾಗಿದ್ದರೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತೆ ಯಾಗೋ ನಂಬರಿಗೆ ಹಾಕುತ್ತಿದ್ದಾರೆ. ಇವರು ವಿರುದ್ಧ ಸಾಕಷ್ಟು ಭಾರಿ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.