ಗಾಳಿ ಮಳೆಗೆ ಬಾಳೆ ಬೆಳೆ ಹಾನಿ


ಸಂಜೆವಾಣಿ ವಾರ್ತೆ
ಸಂಡೂರು :ಮೇ:14 ಸಂಡೂರು ತಾಲ್ಲೂಕಿನ ಚೋರನೂರು ಹೋಬಳಿಯ ಯರ್ರೆಯ್ಯನಹಳ್ಳಿ ಹಾಗೂ ತುಂಬಗುದ್ದಿ ಭಾಗದಲ್ಲಿ ಅಬ್ಬರದ ಮಳೆ ಹಾಗೂ ಬೀಸಿದ ಗಾಳಿಯಿಂದಾಗಿ ಆ ಭಾಗದಲ್ಲಿ 4-5 ಎಕರೆ ಪ್ರದೇಶದಲ್ಲಿನ ಬಾಳೆ ಬೆಳೆಗೆ ಹಾನಿಯಾಗಿದೆ. ಕೆಲವಡೆ ತೆಂಗಿನ ಮರಗಳು ಬುಡ ಮೇಲಾಗಿ ಬಿದ್ದಿವೆ. ಯರ್ರೆಯ್ಯನಹಳ್ಳಿ ಗ್ರಾಮದಲ್ಲಿ ಭಾಗ್ಯಮ್ಮ ಎನ್ನುವವರ ಮನೆಯ ಛಾವಣಿ ಕುಸಿದಿದೆ. ತೋಟಗಾರಿಕೆ ಇಲಾಖೆಯ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಿಸಿದ್ದಾರೆ. ಚೋರನೂರು ಹಾಗೂ ಕುರೇಕುಪ್ಪ ಮಳೆ ಮಾಪನ ಕೇಂದ್ರಗಳಲ್ಲಿ ಕ್ರಮವಾಗಿ 13 ಮಿ.ಮೀಟರ್ ಹಾಗೂ 6.1 ಮಿ.ಮೀಟರ್ ಮಳೆಯಾದ ಬಗ್ಗೆ ವರದಿಯಾಗಿದೆ.

One attachment • Scanned by Gmail