ಗಾಳಿ  ಮಳೆಗೆ  ನೆಲಕ್ಕುರುಳಿದ ಬಾಳೆಗಿಡಗಳು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 11 : ತಾಲೂಕಿನ ಹೊಸಹಳ್ಳಿ   ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಸಂಜೆ ಅರ್ದ ಗಂಟೆಗೂ ಹೆಚ್ಚು ಕಾಲ ಗಾಳಿ  ಮಳೆಯಾಗಿದ್ದು ಇದರಿಂದ ತಾಲೂಕಿನ ಅಗ್ರಹಾರದಲ್ಲಿ ರೈತರೊಬ್ಬರ ಬಾಳೆ ಗಿಡಗಳು ನೆಲಕ್ಕೂರುಳಿವೆ ಎಂದು ತಿಳಿದಿದೆ .
ತಾಲೂಕಿನ  ಅಗ್ರಹಾರ ಗ್ರಾಮದ ರೈತ ಕೆ.ಎಂ.ವೀರೇಶನಿಗೆ ಸೇರಿದ  ಸುಮಾರು 3 ಎಕರೆ 56 ಸೇಂಟ್ಸ್ ನಲ್ಲಿ ಬೆಳಿದಿದ್ದ ಬಾಳೆ ಗಿಡಗಳು ನೆಲಕ್ಕುರುಳಿವೆ ಎಂದು ಕಂದಾಯ ನಿರೀಕ್ಷಕ ಆಲೂರು ತಿಪ್ಪೇಸ್ವಾಮಿ ಹಾಗೂ ಗ್ರಾಮಲೆಕ್ಕಿಗರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಿಳಿಸಿದ್ದಾರೆ. ತೋಟಗಾರಿಕ ಇಲಾಖೆಯ ಅಧಿಕಾರಿಗಳ ಪರಿಶೀಲನೆಯ ನಂತರ ನಷ್ಟದ ಅಂದಾಜು ತಿಳಿಯಲಿದೆ ಎಂದು ಹೇಳಬಹುದಾಗಿದೆ
ತಾಲೂಕಿನ  ಹುಲಿಕೆರೆ, ಬಯಲುತುಂಬರಗುದ್ದಿ, ಬೆಳ್ಳಕಟ್ಟೆ ಹಾರಕಭಾವಿ,ಇಮಡಾಪುರ, ಬಣವಿಕಲ್ಲು, ಸೂಲಸಹಳ್ಳಿ, ಚೌಡಪುರ, ಐಗಳ ಮಲ್ಲಾಪುರ ಸೆರಿದಂತೆ ಇತರೆಡೆ ಉತ್ತಮ ಮಳೆಯಾಗಿದೆ.