ಗಾಳಿಯಿಂದ ಕೊರೊನಾ ಸೋಂಕು ಪ್ರಸರಣ


ನವದೆಹಲಿ, ಮೇ.೨೬-ಕೊರೊನಾ ಸೋಂಕು ಪ್ರಸರಣ ಬಹುಪಾಲು ಗಾಳಿಯ ಮೂಲಕ ಹರಡಿದೆ ಎನ್ನುವ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸದಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಈ ವಿಷಯ ತಿಳಿಸಿದೆ.ಕೊರೊನಾ ಸೋಂಕಿತ ವ್ಯಕ್ತಿ ಕೆಮ್ಮಿದಾಗ,ಸೀನಿದಾಗ ಮಾತುಕತೆ ನಡೆಸಿದಾಗ ಸೋಂಕು ಗಾಳಿಯ ಮೂಲಕ ಇತರರಿಗೂ ಹರಡಿದೆ ಎನ್ನುವುದು ಇತ್ತೀಚಿನ ಮಾಹಿತಿಯಿಂದ ತಿಳಿದು ಬಂದಿದೆ.
ಉಸಿರಾಟ ಮತ್ತು ಗಾಳಿಯ ಮೂಲಕ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡಿದೆ .ಅದರಲ್ಲಿ ನಿಕಟ ಸಂಪರ್ಕ ಹೊಂದಿದವರಲ್ಲಿ ಈ ಪ್ರಮಾಣ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕೊರೋನೋ ಸೋಂಕಿತರೊಂದಿಗೆ ೧೦ ಮೀಟರ್ ಅಂತರದಲ್ಲಿ ಮಾತನಾಡಿದರೂ ಕೂಡ ಗಾಳಿಯ ಮೂಲಕ ಸೋಂಕು ಹರಡಲಿದೆ ಎನ್ನುವ ಕುರಿತು ತಜ್ಞರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಕೊರೋನೋ ಸೋಂಕಿತರೊಂದಿಗೆ ಮಾತನಾಡುವುದು ಇಲ್ಲವೇ ಅವರು ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಸೋಂಕು ಮತ್ತೊಬ್ಬರಿಗೆ ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಲಾಗಿದೆ.
ತಜ್ಞರ ಮಾಹಿತಿಯನ್ನು ಆಧರಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ಕೋವಿಡ್ ಸೂಚಿಗಳನ್ನು ಹೊರಡಿಸಿದ್ದು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಕೊರೋನಾ ಸೋಂಕಿನಿಂದ ಪಾರಾಗಲು ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆಗಾಗ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ.