ಗಾಳಿಮಳೆಗೆ ಮಾವಿನ ಫಸಲು ನಾಶ. ಎರಡು ಮನೆಗಳ ಮೇಲ್ಚಾವಣಿ ಹಾರಿ ಜನಜೀವನ ಅಸ್ತವ್ಯಸ್ಥ.

ಕೂಡ್ಲಿಗಿ. ಏ. 24:- ತಾಲೂಕಿನ ಗುಡೇಕೋಟೆ ಹೋಬಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಭಾರೀ ಗಾಳಿ ಹಾಗೂ ಮೊದಲ ಮಳೆಗೆ ಶ್ರೀ ಕಂಠಾಪುರ ತಾಂಡದಲ್ಲಿ ಎರಡು ಮನೆಗಳ ಮೇಲ್ಚಾವಣಿ ಹಾರಿ ಹೋಗಿದ್ದು ಅಲ್ಲದೇ ಗುಡೇಕೋಟೆ ಗ್ರಾಮದಲ್ಲಿ ರೈತನೊಬ್ಬನ ತೋಟದ ಮಾವಿನ ಮರಗಳಿಂದ ಕಾಯಿಗಳು ಉದುರಿ ರೈತರಿಗೆ ಅಪಾರ ನಷ್ಠ ಸಂಭವಿಸಿದ ಘಟನೆ ನಡೆದಿದೆ.
ಶ್ರೀ ಕಂಠಾಪುರ ತಾಂಡಾದ ಚಂದ್ರನಾಯ್ಕ ಹಾಗೂ ಲಕ್ಷ್ಮನಾಯ್ಕ ಎನ್ನುವವರಿಗೆ ಸೇರಿದೆ ಎರಡು ಮನೆಗಳ ಮೇಲ್ಚಾವಣಿಗೆ ಹಾಕಿದ್ದ ಸಿಮೆಂಟ್ ಸೀಟ್ ಗಳು ಹಾರಿ ಹೋಗಿದ್ದು ಎರಡು ಕುಟುಂಬಗಳಿಗೆ ಆಸರೆ ನೀಡಬೇಕಾಗಿದೆ. ಗುಡೇಕೋಟೆ ಗ್ರಾಮದ ಪ್ರಹ್ಲಾದ ಎನ್ನುವ ರೈತನಿಗೆ ಸೇರಿದ ಮಾವಿನ ತೋಟದಲ್ಲಿ ಮಾವಿನ ಕಾಯಿಗಳು ಉದುರಿ ನಷ್ಠ ಸಂಭವಿಸಿದೆ. ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಂತರ ತಿಳಿಯಲಿದೆ. ಸ್ಥಳಕ್ಕೆ ಗುಡೇಕೋಟೆ ಕಂದಾಯ ಪರಿವೀಕ್ಷಕ ಚೌಡಪ್ಪ ಹಾಗೂ ಕಂದಾಯ ಇಲಾಖೆ ಅಽಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ತಾಲೂಕಿನ ಹಲವು ಭಾಗಗಳಲ್ಲಿ ಭಾರೀ ಗಾಳಿಯಿಂದ ಕೆಲವು ಮರಗಳು ನೆಲಕ್ಕುರುಳಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನಾ ಕಾರ್ಯ ನಡೆಸಿದ್ದಾರೆ.
ಪೋಟೋ:-