ಗಾಳಿಪಟ-2 ಹಾಡು ಬಿಡುಗಡೆ ನಿರೀಕ್ಷೆ ಮತ್ತಷ್ಟು  ಹೆಚ್ಚಳ

* ಚಿ.ಗೋ ರಮೇಶ್

ನಿರ್ದೇಶಕ ಯೋಗರಾಜ್ ಭಟ್, ಗೋಲ್ಡನ್ ಸ್ಟಾರ್ ಗಶೇಶ್ ಜೋಡಿಯ “ಗಾಳಿಪಟ – 2” ಚಿತ್ರ ಬಿಡುಗಡೆಗೆ ಮುನ್ನ ನಿರೀಕ್ಷೆ ಹುಟ್ಟಿಸಿದೆ. ಚಿತ್ರಕ್ಕೆ ಜಯಂತ ಕಾಯ್ಕಿಣಿ  ಬರೆದಿರುವ

 “ನೀನು ಬಗೆಹರಿಯದ ಹಾಡು” ಗೀತೆ ಬಿಡುಗಡೆಯಾಗಿದ್ದು ಸದ್ದು ಮಾಡಿದೆ. ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗಷ್ಟೇ ದೇವ್ಲೇ ದೇವ್ಲೇ ಹಾಡು ಬಿಡುಗಡೆಯಾಗಿ ಬಾರಿ ಸದ್ದು ಮಾಡುತ್ತಿದೆ. ಈ ನಡುವೆ ಅರ್ಜುನ್ ಜನ್ಯ ಸಂಗೀತ ನೀಡಿರುವ  “ನೀನು ಬಗೆಹರಿಯದ “

ಹಾಡನ್ನು ಖ್ಯಾತ ಗಾಯಕ ನಿಹಾಲ್ ತಾವ್ರೋ ಹಾಡಿದ್ದಾರೆ. ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಹಾಡಿನಲ್ಲಿ ಅಭಿನಯಿಸಿದ್ದು ಇಬ್ಬರೂ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.  ಕುದುರೆಮುಖದ ಸುಂದರ ಪರಿಸರದಲ್ಲಿ  ಹಾಡಿನ‌ ಚಿತ್ರೀಕರಣ ನಡೆದಿದೆ. ಧನು ನೃತ್ಯ ನಿರ್ದೇಶನ ಮಾಡಿದ್ದಾರೆ.ಸದ್ಯದಲ್ಲೇ ಟೀಸರ್, ಟ್ರೇಲರ್ ಹಾಗೂ ಇನ್ನೂ ಎರಡು ಹಾಡುಗಳ ಬಿಡುಗಡೆಯಾಗಲಿದೆ. ಆಗಸ್ಟ್ 12 ಕ್ಕೆ ಚಿತ್ರ ತೆರೆಗೆ ಬರಲಿದೆ.

ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಚಿತ್ರಕ್ಕೆ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

ಉಪೇಂದ್ರ ಹಾರೈಕೆ

ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಾತ್ರ ಪರಿಚಯ ಮಾಡುವ ಟೀಸರ್ ಅನ್ನು ನಟ,ನಿರ್ದೇಶಕ ಉಪೇಂದ್ರ ಅನಾವರಣ ಮಾಡಿ ಶುಭ ಹಾರೈಸಿದ್ದಾರೆ.

ಈ ವೇಳೆ ಅವರು ಎಲ್ಲಾ ಕಾರ್ಯಕ್ಕೂ ವಿಘ್ನೇಶ್ವರನ್ನು ಮೊದಲು ಪೂಜಿಸುತ್ತಾರೆ.ಈಗ ಗಾಳಿಪಟ-2 ಚಿತ್ರದಲ್ಲಿ ನಾಯಕ ಗಣೇಶನ ಪಾತ್ರ ಪರಿಚಯದ ಟೀಸರ್ ಬಿಡುಗಡೆ ಮಾಡಿದ್ದು ಗಾಳಿಪಟ ದೊಡ್ಡಮಟ್ಟದಲ್ಲಿ ಸದ್ದು ಮಾಡಲಿ ಎಂದು ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಯೊಗರಾಜ ಭಟ್ ಹಾಗು ನಟ ಗಣೇಶ್ ಗೆ  ಶುಭ ಹಾರೈಸಿದ್ದಾರೆ.