ಗಾಳಿಪಟ-2ಕ್ಕೆ ತಾರಾ ಮೆರುಗು

* ಚಿ.ಗೋ ರಮೇಶ್

ದಶಕದ ಹಿಂದೆ ತೆರೆಗೆ ಬಂದು ಯಶಸ್ವಿಯಾಗಿದ್ದ “ಗಾಳಿಪಟ” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಯೋಗರಾಜ್ ಇದೀಗ ಅದೇ ಖುಷಿ ಮತ್ತು ಹುಮ್ಮಸ್ಸಿನಲ್ಲಿ ನಿರ್ದೇಶನ ಮಾಡಿರುವ “ಗಾಳಿಪಟ-2 ಹಾರಾಟಕ್ಕೆ ಮುಹೂರ್ತ ನಿಗಧಿಯಾಗಿದೆ.

ಈ ಬಾರಿ ನಿರ್ಮಾಪಕ ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಹಳೆಯ ಕಲಾವಿದರ ತಂಡದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಯೋಗರಾಜ್ ಭಟ್ಟರು.

ಚಿತ್ರ ಈ ಮುಂದಿನ ವಾರ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಟರಾದ ಶಿವರಾಜ್‍ಕುಮಾರ್, ರಮೇಶ್ ಅರವಿಂದ್, ಉಪೇಂದ್ರ, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಮತ್ತಿತರರು ಆಗಮಿಸಿ ಗಾಳಿಪಟ-2 ಮತ್ತಷ್ಟು ಬಾನೆತ್ತರಕ್ಕೆ ಹಾರಾಟ ಮಾಡಲಿ ಎಂದು ಶುಭಹಾರೈಸಿದರು.

ನಿರ್ದೇಶಕ ಯೋಗರಾಜ್ ಭಟ್, ರಸ್ತೆಯಲ್ಲಿ ಸಿಗುವ ಸಂಬಂಧ, ರಕ್ತ ಸಂಬಂಧಕ್ಕಿಂತ ಹೆಚ್ಚು ಎಂದು ನಂಬಿರುವವನು ನಾನು. ಸ್ನೇಹದಿಂದಲೇ ಹದಿನಾಲ್ಕು ವರ್ಷಗಳ ಹಿಂದೆ “ಗಾಳಿಪಟ” ನಿರ್ಮಾಣವಾಯಿತು. “ಗಾಳಿಪಟ 2′” ಈಗ ಅದೇ ಸ್ನೇಹದಿಂದ ನಿರ್ಮಾಣವಾಗಿದೆ. ಚಿತ್ರ ನೋಡಿ ಗೆಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಪಕ ರಮೇಶ್ ರೆಡ್ಡಿ.  ಮಾತನಾಡಿ ಯೋಗರಾಜ್ ಭಟ್ ಒಳ್ಳೆಯ ಚಿತ್ರ  ಮಾಡಿ ಕೊಟ್ಟಿದ್ದಾರೆ. ಚಿತ್ರ ಚೆನ್ನಾಗಿ ಬರಲು ತಂಡ ಶ್ರಮಿಸಿದೆ, ಶಿವಣ್ಣ, ಉಪೇಂದ್ರ ಹಾಗೂ ರಮೇಶ್ ಸರ್ ಬಂದಿರುವುದು  ಮತ್ತಷ್ಟು ಖುಷಿಕೊಟ್ಟಿದೆ ಎಂದರು.

ನಟ ಗಣೇಶ್, ಚಿತ್ರದ ಡಬ್ಬಿಂಗ್ ಮುಗಿದ ಮೇಲೆ  ಭಟ್ಟರಿಗೆ ಫೋನ್ ಮಾಡಿ “ಗಾಳಿಪಟ 2” ಅಬ್ದುತ ಚಿತ್ರ ಮಾಡಿದ್ದೀರಿ ಎಂದು ಶುಭಹಾರೈಸಿದ್ದೇನೆ. ನೀವೆಲ್ಲಾ ನೋಡಿ ಹಾರೈಸಿ ಎಂದರು. ಕಲಾವಿದರಾದ ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ, ವೈಭವಿ, ರಂಗಾಯಣ ರಘು, ಸುಧಾ ಬೆಳವಾಡಿ, ಅರ್ಜುನ್ ಜನ್ಯ,ಸಂತೋಷ್ ರೈ ಪಾತಾಜೆ  ಧನು ಮಾಸ್ಟರ್ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಶಿವಣ್ಣಗೆ ಚಿತ್ರ ನಿರ್ಮಾಣ

”  ಹಿರಿಟಯ ನಟ ಶಿವರಾಜ್ ಕುಮಾರ್ ಅವರಿಗೆ ಚಿತ್ರ ನಿರ್ಮಾಣ ಮಾಡಲಾಗುತ್ತಿದ್ದು ಈ ಚಿತ್ರಕ್ಕೆ ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡಲಾಗುವುದು. ಇನ್ನು ಗಾಳಿಪಟ -2 ಚಿತ್ರವನ್ನು ಕಜಕಿಸ್ತಾನ,ಬೆಂಗಳೂರು ,ಕುದುರೆಮುಖ ಸೇರಿದಂತೆ ಹಲವು ಕಡೆ 75 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು ಮುಂದಿನವಾರ ಚಿತ್ರ ತೆರೆಗೆ ಬರಲಿದೆ…’

– ರಮೇಶ್ ರೆಡ್ಡಿ, ನಿರ್ಮಾಪಕ,